ಪುಲ್ವಾಮಾ: 42 ಯೋಧರನ್ನು ಬಲಿ ಪಡೆದೆ ಪ್ರದೇಶ ಪುಲ್ವಾಮಾದಲ್ಲೇ ಇಂದು ನಸುಕಿನಲ್ಲಿ ಉಗ್ರರು ದಾಳಿ ನಡೆಸಿದ್ದು, ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದ್ದಾರೆ.
ದಕ್ಷಿಣ ಕಾಶ್ಮೀರದಲ್ಲಿರುವ ಪುಲ್ವಾಮಾದಲ್ಲಿ ಘಟನೆ ನಡೆದಿದ್ದು, ಉಗ್ರರು ಗುಂಡಿನ ದಾಳಿ ನಡೆಸಿದಾಕ್ಷಣ ಎಚ್ಚೆತ್ತಿರುವ ಸೇನೆ ಪ್ರತಿದಾಳಿ ನಡೆಸುತ್ತಿದೆ.
ಸುಮಾರು 2 ರಿಂದ 3 ಉಗ್ರರು ದಾಳಿ ಮಾಡಿದ್ದಾರೆ ಎಂದು ವರದಿಯಾಗಿದ್ದು, ಇಡಿಯ ಪ್ರದೇಶವನ್ನು ಯೋಧರು ಸುತ್ತುವರೆದಿದ್ದಾರೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ…
Discussion about this post