ಇಸ್ಲಾಮಾಬಾದ್: ಪುಲ್ವಾಮಾದಲ್ಲಿ ನಡೆದು ಉಗ್ರರ ದಾಳಿ ಬೆನ್ನಲ್ಲೇ ಪಾಕಿಸ್ಥಾನದಲ್ಲಿರುವ ಬಲೂಚಿಸ್ತಾನದ ಸನಿಹದಲ್ಲಿ ಆತ್ಮಹತ್ಯಾ ದಾಳಿ ನಡೆದಿದ್ದು 9 ಮಂದಿ ಬಲಿಯಾಗಿ, 11 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ.
ಈ ಕುರಿತಂತೆ ಬಲೂಚಿಸ್ತಾನ್ ಪೋಸ್ಟ್ ವರದಿ ಮಾಡಿದ್ದು ಬಲೂಚ್ ರಜಿ ಅಜೋಯ್ ಸಂಗರ್ ಸಂಘಟನೆ ದಾಳಿಯನ್ನು ಒಪ್ಪಿಕೊಂಡಿದ್ದು, ತುರ್ಬತ್ ಹಾಗೂ ಪಂಜ್ಗರ್ ನಡುವೆ ಈ ದಾಳಿ ನಡೆದಿದೆ. ದಾಳಿ ನಡೆದ ಪ್ರದೇಶ ಚೀನಾ ಪಾಕಿಸ್ತಾನ ಆರ್ಥಿಕ ಕಾರಿಡಾರ್(ಸಿಪಿಇಸಿ) ಮಾರ್ಗದಲ್ಲಿದೆ.
ಸೌದಿ ಅರೇಬಿಯಾ ದೊರೆ ಮೊಹ್ಮದ್ ಬಿನ್ ಸಲ್ಮಾನ್ ಪಾಕಿಸ್ಥಾನಕ್ಕೆ ಆಗಮಿಸುವ ಕೆಲವೇ ನಿಮಿಷಗಳ ಮುನ್ನ ಈ ದಾಳಿ ನಡೆದಿದೆ.
ಬಲೂಚ್ ರಜಿ ಅಜೋತ್ ಸಂಗರ್ ಸಂಘಟನೆ, ಬಲೂಚ್ ಪ್ರೊ ಫ್ರೀಡಂ ಆರ್ಗನೈಸೇಶನ್, ಬಲೂಚ್ ಲಿಬರೇಶನ್ ಆರ್ಮಿ, ಬಲೂಚಿಸ್ತಾನ್ ಲಿಬರೇಶನ್ ಫ್ರಂಟ್ ಬಲೂಚ್ ರಿಪಬ್ಲಿಕನ್ ಗಾರ್ಡ್ ಸಂಘಟನೆಗಳನ್ನು ಒಳಗೊಂಡಿದೆ.
Discussion about this post