ಕಲ್ಪ ಮೀಡಿಯಾ ಹೌಸ್ | ಆನಂದಕಂದ ಲೇಖನ ಮಾಲಿಕೆ-6 |
ನಾನು ಎಂದೂ ಮರೆಯಲಾಗದ ನನ್ನ ಜೀವ(ನ)ದ ಗುರುಗಳನ್ನು ಆದರ್ಶವಾಗಿಸಿಕೊಂಡಿದ್ದೇನೆ. ಅವರು ತಮ್ಮ ಎಲ್ಲ ನೋವು-ಕಷ್ಟಗಳನ್ನು ಬದಿಗೊತ್ತಿ ನಮ್ಮ ಏಳಿಗೆಗಾಗಿ ಶ್ರಮಿಸುತ್ತಿರುವರೇ ನಮ್ಮ ಪ್ರೀತಿಯ ತಾಯಿ.
ನನ್ನ ಜನನವಾದ ನಂತರ ನಮಗೆ ಮೊದಲಿಗೆ ಒಂದೊಂದು ಅಕ್ಷರವನ್ನೂ ಕೂಡ ಕಲಿಸಿದ, ಅದರಲ್ಲೂ ಸಿರಿಗನ್ನಡವನ್ನು ಹೇಳಿ ಕೊಟ್ಟ ನಮ್ಮ ತಾಯಿಗೆ ಕೋಟಿ ಕೋಟಿ ಧನ್ಯವಾದ.
ನಾವು ಮಲ-ಮೂತ್ರ ಮಾಡಿದರೂ ತಾಯಿ ಛೀ.. ಥೂ… ಎಂದು ಅಸಹ್ಯಿಸಿಕೊಳ್ಳದೇ ಅದನ್ನು ಸಹಿಸಿಕೊಂಡು ನಮ್ಮ ಆರೈಕೆ ಮಾಡುವ ಮಹಾನ್ ಚೇತನಗಳು. ಇಂತಹ ತಾಯಿಗೆ ನಾವು ಓದುವ ವೇದವೂ ‘मातृदेवो भव’ ಎಂದು ಗೌರವಿಸಿರುವುದು. ಅಂದರೆ ತಾಯಿ ದೇವರಿಗೆ ಸಮಾನ ಎಂದು ಅರ್ಥ. ನಾವು ಮಾತ್ರ ಅಲ್ಲದೆ ವೇದವೇ ಹೊಗಳುವ ಕೀರ್ತಿ ಅವರದು.
ತುಂಬು ಹೃದಯದಿಂದ ನಮ್ಮನ್ನು ಪ್ರೀತಿಸುತ್ತಾ, ಬೆಳೆಸುತ್ತಾ, ಕಷ್ಟಪಟ್ಟು ಮನೆಯೆಲ್ಲಾ ನೋಡಿಕೊಳ್ಳುವ ಯಾವೊಬ್ಬ ಮನುಷ್ಯನನ್ನೂ ನಾ ಕಂಡಿಲ್ಲ. ಅಂತಹ ಅಮ್ಮನ ಎತ್ತರವನ್ನು ಏರಲು ಯಾರೊಬ್ಬನಿಗೂ ಸಾಧ್ಯವಿಲ್ಲ.
ನಮ್ಮನ್ನು ಮಾತ್ರವಲ್ಲದೇ ಮನೆಯಲ್ಲಿರುವ ಅಪ್ಪ-ಅಜ್ಜ-ಅಜ್ಜಿ- ಅತ್ತೆ-ಮಾಮ…ಹೀಗೆ ಎಲ್ಲರ ಸೇವೆಯನ್ನು ಮಾಡುತ್ತಿರುವರು. ಅವರಿಗೆ ಬೇಸರ ಎನ್ನುವ ಪದಕ್ಕೆ ಅರ್ಥವೇ ಗೊತ್ತಿಲ್ಲದಂತಿರುತ್ತಾರೆ. ಇಂತಹ ಅಮ್ಮನಿಗೆ ಇಡೀ ಜನುಮ ಸೇವೆಗೈದರೂ ಪ್ರತ್ಯುಪಕಾರಗೈಯಲು ದೇವತೆಗಳಿಗೂ ಆಗುವುದೋ ಇಲ್ಲವೊ ಗೊತ್ತಿಲ್ಲ.
ಅಮ್ಮನಿಗೆ ನಾನು ಎಂಬ ಯಾವುದೇ ತರಹದ ಅಹಂಕಾರವಿಲ್ಲ. ಇಂತಹ ತಾಯಿಯ ಸ್ಥಾನದಲ್ಲಿ ನಾನು ಬರಬೇಕು. ಆದ್ದರಿಂದ ಅವರೇ ನನಗೆ ಆದರ್ಶ.
ನನ್ನ ಹುಟ್ಟಿನಿಂದ ಈವರೆಗೂ ನನ್ನನ್ನು ಪೋಷಿಸುತ್ತಿರುವ ನಾನು ಈ ಮಟ್ಟಕ್ಕೆ ಏರಲು ಕಾರಣರಾದ ಅಮ್ಮನಿಗೆ ಈ ಬರಹ ನಮನ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post