ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಗೋಪಿನಾಥ್ ಮುಂಡೆ, ಅನಿಲ್ ಧವೆ, ಅನಂತಕುಮಾರ್, ಅಟಲ್ ಬಿಹಾರಿ ವಾಜಪೇಯಿ, ಮನೋಹರ್ ಪರಿಕ್ಕರ್, ಸುಷ್ಮಾ ಸ್ವರಾಜ್ ಇಹಲೋಕ ತ್ಯಜಿಸಿದರೆ ಇಂದು ಅರುಣ್ ಜೇಟ್ಲಿ ವಿಧಿವಶರಾಗಿದ್ದಾರೆ. ಬಿಜೆಪಿಯ ಪ್ರಮುಖರು ಒಬ್ಬೊಬ್ಬರಾಗಿ ಅಸ್ತಂಗತರಾಗಲು ಕಾರಣ ಇದೆ. ಏನದು? ಮುಂದೆ ಓದಿ…
ಹಿಂದೆ ತುರ್ತು ಪರಿಸ್ಥಿತಿ ಕಾಲದಲ್ಲಿ ಧರ್ಮದ ರಕ್ಷಣೆಗಾಗಿ ಹೋರಾಡಿದವರನ್ನು ದುರಾಡಳಿತದಿಂದ ಒಬ್ಬೊಬ್ಬರನ್ನು ಒದ್ದು ಜೈಲಿಗೆ ಹಾಕಿದ್ದು ಮಾತ್ರವಲ್ಲ ಅವರ ಆರೋಗ್ಯಕ್ಕೂ ಹಾನಿ ಮಾಡಿದ್ದರು. ಅಂತವರಲ್ಲಿ ಅಟಲ್ ಜೀಯಂತಹ ಮಹಾನುಭಾವರಿದ್ದರು. ಕರ್ನಾಟಕದಲ್ಲಿ ಅನಂತಕುಮಾರ್, ಯಡ್ಯೂರಪ್ಪ ಮುಂತಾದವರು ಶಿಕ್ಷೆ ಅನುಭವಿಸಿದವರು.
ಉತ್ತಮರನ್ನು ಅಪರಾಧಿಯಾಗಿ ಮಾಡಿ ತಾವು ಐಷಾರಾಮಿಯಾಗಿ ಬೆಳೆದವರೇ ಈ ಕಾಂಗ್ರೆಸ್ ನಾಯಕರು. ಹೋಗಲಿ ಈ ಕಾಂಗ್ರೆಸ್ ಮಾಡಿದ್ದೇನು? ಕೇವಲ ಲೂಟಿ ಮಾಡಿ ದೇಶವನ್ನು ಹಾಳುಗೆಡವಿದ್ದು ಬಿಟ್ಟರೆ ಬೇರೇನೂ ಇಲ್ಲ. ಈಗ ನೋಡುತ್ತಿರುವಂತೆ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಮಾಡಿದ್ದೇನು. ಇಂತಹ ದರಿದ್ರರ ವಿರುದ್ಧ ಹೋರಾಡಿದ್ದಕ್ಕೇ ಇವರು ಉತ್ತಮರ ಆರೋಗ್ಯ ಹರಣ ಮಾಡಿದ್ದು.
ಅಯೋಧ್ಯಾ ಪ್ರಕರಣದಲ್ಲಿ ಕರಸೇವಕರನ್ನು ಕೊಂದರು, ಸ್ವಾಮೀಜಿಗಳನ್ನು ಸೆರೆಮನೆಗೆ ತಳ್ಳಿ, ಹೀನವಾಗಿ ಹಿಂಸೆ ನೀಡಿದರು. ಎಲ್ಲೆಲ್ಲಿ ಕಾಂಗ್ರೆಸ್ ಆಡಳಿತಗಳಿತ್ತೋ, ಕಮ್ಯುನಿಸ್ಟ್ ಆಡಳಿತ ಇತ್ತೋ ಅಂತಹ ಕ್ಷೇತ್ರಗಳಲ್ಲಿ ಧರ್ಮದ ಪರ ಹೋರಾಡುವ ಕಾರ್ಯಕರ್ತರ ಕೊಲೆ ಮಾಡಿಸಿದರು. ದಕ್ಷ ಆಡಳಿತ ಮಾಡುವ ರಕ್ಷಕ ಅಧಿಕಾರಿಗಳನ್ನು ನಾಶ ಮಾಡಿದರು. ಯಾವುದೋ ವಿದೇಶಿ ಮಹಿಳೆಯ ಅಣತಿಯಂತೆ ದುರಾಚಾರ ಮಾಡಿದರು.
ಇನ್ನು, ಟಿಪ್ಪುವಿನಂತಹ ಮತಾಂಧನ ಜಯಂತಿ ಮಾಡಿ, ಹಿಂದುಗಳನ್ನು ಮುಗಿಸಿದರು. ಚಿತ್ತರಂಜನ್ ಎನ್ನುವ ಭಟ್ಕಳದ ಶಾಸಕರ ಕೊಲೆಯಾಯ್ತು. ಅದರ ವಿಚಾರ ಇವರಿಗೆ ದುಃಖ ಬರಲಿಲ್ಲ. ಯಾಸೀನ್ ಭಟ್ಕಳನಂತಹ ಮತಾಂಧರ ಬಗ್ಗೆ ಕನಿಕರ ಬಂತು. ಇತ್ತೀಚೆಗೆ ಅನಂತ ಕುಮಾರ್ ಹೆಗ್ಡೆಯವರನ್ನು ಭಟ್ಕಳ ಗಲಭೆ ಪ್ರಕರಣದಲ್ಲಿ ಮೊಣಕಾಲ ಮೂಳೆ ಮುರಿಯಲಿಲ್ಲವೇ. ಈಗ ಜನರಿಗೆ ಅರ್ಥವಾಗಿದೆ. ಭಾಜಪವನ್ನು ಒಕ್ಕೊರಲಿನಿಂದ ಬಹು ಸಂಖ್ಯೆಯಲ್ಲಿ ಆರಿಸಿದ್ದಾರೆ. ಆದರೆ ಇದರ ಸುಖ ಉಣ್ಣಲು, ಇನ್ನಷ್ಟು ಉತ್ತಮ ಕಾರ್ಯ ಮಾಡಲು ಭಾಜಪದ ನಾಯಕರು ಅನಾರೋಗ್ಯದಿಂದ ನಿರ್ಗಮಿಸುವಂತಾಗಿದೆ.
ಇವೆಲ್ಲದರ ಫಲ, ಕಾಂಗ್ರೆಸಿನ ಸರ್ವನಾಶವೂ, ಅದರ ನಾಯಕರ ಕಂಬಿ ಎಣಿಕೆಯೂ ನಿಶ್ಚಿತ. ಮಮತಾ ಬ್ಯಾನರ್ಜಿಯಂತಹ ಪಿಶಾಚ ಸ್ವರೂಪದ ನಾಯಕಿಗೆ ಬೆಂಬಲ ನೀಡುತ್ತಾರೆ. ಕರ್ನಾಟಕದಿಂದ ಕುಮಾರಸ್ವಾಮಿಯವರೇ ಓಡೋಡಿ ಹೋಗಿ ಮಮತಾಳಿಗೆ ಬೆಂಬಲವಾಗಿ ಬಂಗಾಳಿ ಭಾಷೆಯಲ್ಲೇ ಭಾಷಣ ಮಾಡಿದರು. ಕೊನೆಗೆ ತನ್ನ ಮುಖ್ಯಮಂತ್ರಿ ಪಟ್ಟದಿಂದಲೇ ಇಳಿದರು. ಇದು ಕೂಡಾ ಕಾಂಗ್ರೆಸಿನ ಬೆಂಬಲದಿಂದಲೇ ನಡೆಯಿತು. ಯಾಕೆಂದರೆ ಕುಮಾರಸ್ವಾಮಿಯಲ್ಲಿ ಹಿಂದುತ್ವ ಕಾಣುತ್ತಿತ್ತು. ಆದರೆ ಕಾಂಗ್ರೆಸ್ಸಿಗೆ ಮಾತ್ರ ಹಿಂದುಗಳೆಂದರೆ ಅಲರ್ಜಿಯಾಗಿತ್ತು.
ಎಲ್ಲೆಲ್ಲಿ ಧರ್ಮಕ್ಕಾಗಿ ಹೋರಾಡುತ್ತಾರೋ ಅಂತವರನ್ನು ಕೊಲ್ಲುವುದು, ಜೈಲಿಗೆ ತಳ್ಳಿ ಹಿಂಸೆ ಕೊಡುವುದೇ ಇವರ ಧರ್ಮ. ಹಿಂದೆ ರಾಕ್ಷಸರು ಮಾಡಿದ್ದೂ ಇದನ್ನೇ. ಆಕ್ರಮಣ ಮಾಡಿದ್ದ ಮುಸಲ್ಮಾನರೂ ದೇವ ಸಾನ್ನಿಧ್ಯ ಹಾಳುಗೆಡವಿದ್ದೂ, ಅಧರ್ಮ ತಾಂಡವವಾಡಿದರೆ ತಾವು ಸಾಕಷ್ಟು ಮುಕ್ಕಬಹುದು ಎಂಬುದಕ್ಕಾಗಿ. 370 ನೆಯ ವಿಧಿಯನ್ನು ರದ್ದು ಮಾಡಿದಾಗ ಕಾಣಲಿಲ್ಲವೇ ಈ ಪಾಪಿಗಳ ಆಕ್ರಂಧನ? ಆದರೆ ಧರ್ಮ ಎಂದೂ ಸಾಯದು. ಚಿತ್ರಹಿಂಸೆ ಅನುಭವಿಸಿದಂತಹ ನರೇಂದ್ರ ಮೋದಿ, ಅಮಿತ್ ಶಾ, ರಾಜನಾಥ ಸಿಂಗ್ ಇನ್ನೂ ಬದುಕಿದ್ದಾರೆ. ಅವರ ಕೈಯಲ್ಲೇ ಮಮತಾ ಸೋನಿಯಾ, ರಾಹುಲ್, ಪ್ರಿಯಾಂಕ, ವಾದ್ರಾ ಜೈಲು ಸೇರುವುದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವೇ ಇಲ್ಲ. ಅಂದರೆ ಇವರಿಗೆ ವ್ಯಾಪಿಸಿದ ರೋಗವು 4th stageಗೆ ಹೋಗಿಯಾಗಿದೆ. ಇನ್ನು ಜೈಲೇ ಗತಿ.
BJPಗೆ ಒಂದು ಸಂದೇಶ
ಈಗ ನಾನು ಬಿಜೆಪಿಗೆ ಬರ್ತೇನೆ, ನರೇಂದ್ರ ಮೋದಿಯವರನ್ನು ಹೊಗಳುತ್ತಾ ಹೊಗಳುತ್ತಾ ಬಿಜೆಪಿಗೆ ಬರುತ್ತೇನೆ ಎನ್ನುವ ಅವಕಾಶವಾದಿಗಳ ಬಗ್ಗೆ ಎಚ್ಚರವಿರಲಿ. ಬಿಜೆಪಿಗೆ ಬರಲಿ. ಆದರೆ ಸರತಿಯ ಸಾಲಿನಲ್ಲಿ ಪೋಸ್ಟರ್ ಹಾಕುವಲ್ಲಿಂದ ತಳಮಟ್ಟದ ಕಾರ್ಯಕರ್ತನಾಗಿ ನಿಂತು, ಪಕ್ಷಕ್ಕಾಗಿ ಹಗಲಿರುಳು ದುಡಿಯಲಿ. ನಾನು ಪಕ್ಷದಲ್ಲಿ ಕೆಲಸ ಮಾಡುವಾಗ ನಮ್ಮ ನಾಯಕರಾಗಿದ್ದ ಸುಳ್ಯದ ಪುಟ್ಟಪ್ಪ ಜೋಷಿಯವರಿಗೆ ಎಷ್ಟು ಹಿಂಸೆ ನೀಡಿದ್ದಾರೆ ಎಂದು ನನ್ನ ಕಣ್ಣೆದುರಿನ ಸಾಕ್ಷಿ ಇದೆ. ಕೊನೆಗೆ ಅವರನ್ನು ವಾಹನಾಪಘಾತ ಮಾಡಿಸಿ ಮುಗಿಸಿದರು. ಹಾಗಾಗಿ, ಬಿಜೆಪಿ ಪಕ್ಷದ ಅಭಿವೃದ್ಧಿಗೆ ಇನ್ಯಾರೂ ಅಗತ್ಯವಿಲ್ಲ. ಬರುವುದಾದರೆ ಹಿಂದಿನ ಸಾಲಿನಲ್ಲಿ ನಿಂತು ಬರಲಿ. ಒಟ್ಟಿನಲ್ಲಿ ಧರ್ಮ ರಕ್ಷಣೆಯೇ ನಮ್ಮ ಗುರಿಯಾಗಿರಬೇಕು. ಅಧಿಕಾರ ಹಿಡಿಯುವುದಕ್ಕಿಂತ ಧರ್ಮ ರಕ್ಷಣೆಯೇ ನಮ್ಮ ಪರಮ ಗುರಿಯಾಗಿರಬೇಕು.
ಧರ್ಮೋ ರಕ್ಷತಿ ರಕ್ಷಿತಃ
ಲೇಖನ: ಪ್ರಕಾಶ್ ಅಮ್ಮಣ್ಣಾಯ, ಜ್ಯೋರ್ತಿವಿಜ್ಞಾನಂ
Discussion about this post