ನವದೆಹಲಿ: ಕೇಂದ್ರದ ಮಾಜಿ ಸಚಿವ ಅರುಣ್ ಜೇಟ್ಲಿ ವಿಧಿವಶರಾಗಿದ್ದು, ಈ ಮೂಲಕ ಬಿಜೆಪಿ ಮನೆಯಲ್ಲಿ ಸೂತಕದ ಛಾಯೆ ಅವರಿಸಿದೆ. ಇದೇ ವೇಳೆ ಪೂರ್ವ ನಿರ್ಧಾರಿತ ಅಧಿಕೃತ ಸಭೆಗಳಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದು, ಇಂದು ಅಬುದಾಬಿಯಲ್ಲಿದ್ದಾರೆ.
ಅಬುದಾಬಿಯಲ್ಲಿ ನಡೆಯುತ್ತಿದ್ದ ಮಹತ್ವದ ಸಭೆಯಲ್ಲಿ ತಲ್ಲೀನರಾಗಿದ್ದ ಮೋದಿಯವರಿಗೆ ಅರುಣ್ ಜೇಟ್ಲಿ ನಿಧನದ ಸುದ್ದಿ ಬರಸಿಡಿಲಿನಂತೆ ಎರಗಿದೆ.
ತತಕ್ಷಣವೇ ಕರೆ ಮಾಡಿ ಜೇಟ್ಲಿ ಪತ್ನಿ ಹಾಗೂ ಪುತ್ರನೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ಸಾಂತ್ವನ ಹೇಳಿದ್ದಾರೆ. ಹಾಗೆಯೇ, ವಿದೇಶ ಪ್ರವಾಸ ಮೊಟಕುಗೊಳಿಸಿ, ಹಿಂತಿರುಗುವ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ, ಇದಕ್ಕೆ ಜೇಟ್ಲಿ ಕುಟುಂಬಸ್ಥರು ಹೇಳಿದ್ದೇನು ಗೊತ್ತಾ?
ಯಾವುದೇ ಕಾರಣಕ್ಕೂ ನಿಮ್ಮ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಹಿಂತಿರುಗಬೇಡಿ. ಇಲ್ಲಿ ನೀವು ಬರುವುದಕ್ಕಿಂತಲೂ ದೇಶಕ್ಕಾಗಿ ದುಡಿಯುತ್ತಿರುವ ನಿಮ್ಮ ಕರ್ತವ್ಯ ಮುಖ್ಯ. ಕರ್ತವ್ಯ ಮೊದಲು ಎಂದು ಅವರು(ಅರುಣ್ ಜೇಟ್ಲಿ) ಎಂದಿಗೂ ಹೇಳುತ್ತಿದ್ದರು. ದೇಶ ಮೊದಲು… ಮಿಕ್ಕಿದ್ದೆಲ್ಲವೂ ನಂತರ… ಎಂದು ಹೇಳುವ ಮೂಲಕ ಜೇಟ್ಲಿ ಅಗಲಿಕೆಯ ನೋವಿನಲ್ಲೂ ಸಹ ಸಾರ್ಥಕತೆ ಮರೆದಿದ್ದಾರೆ ಅವರ ಕುಟುಂಬಸ್ಥರು.
ಆದರೆ, ತಮ್ಮ ಆತ್ಮ ಸ್ನೇಹಿತರಲ್ಲಿ ಒಬ್ಬರಾಗಿದ್ದ, ತಮ್ಮ ಸಂಪುಟದಲ್ಲಿ ಪ್ರಮುಖ ಖಾತೆಯನ್ನು ಯಶಸ್ವಿಯಾಗಿ ನಿರ್ವಹಿಸಿ ಬೆಂಬಲ ನೀಡಿದ್ದ ಜೇಟ್ಲಿ ಅವರ ಅಂತಿಮ ದರ್ಶನ ಪಡೆಯಲು ಪ್ರಧಾನಿಯವರು ತಮ್ಮ ವಿದೇಶ ಪ್ರವಾಸವನ್ನು ಮೊಟಕುಗೊಳಿಸಿ ಹಿಂತಿರುಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
Discussion about this post