No Result
View All Result
ಸಾಂಕ್ರಾಮಿಕವಲ್ಲದ ಕಾಯಿಲೆಗಳ ಬಗ್ಗೆ ಎಚ್ಚರ ಅವಶ್ಯ : ಡಾ. ಸುಶ್ರುತ ಗೌಡ
English Articles

Post-COVID Surge: Lifestyle Diseases Now Striking People in Their 40s, Warns Neurologist  Dr. Sushrutha Gowda

by ಕಲ್ಪ ನ್ಯೂಸ್
March 9, 2026
0

Kalpa Media House  |  Mysuru | Non-communicable diseases that were earlier seen mostly after the age of 60 are now...

Read moreDetails
Yamaha Introduces XSR155 in ‘Metallic Black’ shade

Yamaha Introduces XSR155 in ‘Metallic Black’ shade

March 9, 2026
ಎಲ್ಲವನ್ನೂ ಎದುರಿಸಿ ಕೃಷ್ಣನ ಬಾಳಿಗೆ ಬೆಳಕಾಗ್ತಾಳಾ ರುಕ್ಕು?

A tale of love, revenge and destiny: Krishna Rukku to premiere on March 9 on Zee Kannada and ZEE5 Kannada

March 5, 2026

Record Budget: Chief Minister Must Fulfill Hometown Demands, Urges Dr. Shushrutha Gowda

March 2, 2026
Hotel Management Students Participate in Tree Census

Hotel Management Students Participate in Tree Census

March 2, 2026
  • Advertise With Us
  • Grievances
  • About Us
  • Contact Us
Tuesday, March 10, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಜಿಲ್ಲೆ ಶಿವಮೊಗ್ಗ

ಅಸ್ಪೃಷ್ಯತೆಯನ್ನು ಸಾತ್ವಿಕವಾಗಿ ಪ್ರತಿಭಟಿಸಿದವರು ಬಾಬು ಜಗಜೀವನ್ ರಾಮ್: ಡಾ. ಗಂಗಾಧರ್

ಕುವೆಂಪು ವಿವಿಯಲ್ಲಿ ಡಾ. ಬಾಬು ಜಗಜೀವನ್ ರಾಮ್ ಕುರಿತು ವಿಚಾರ ಸಂಕಿರಣ

ಕಲ್ಪ ನ್ಯೂಸ್ by ಕಲ್ಪ ನ್ಯೂಸ್
March 9, 2022
in ಶಿವಮೊಗ್ಗ
0
ಅಸ್ಪೃಷ್ಯತೆಯನ್ನು ಸಾತ್ವಿಕವಾಗಿ ಪ್ರತಿಭಟಿಸಿದವರು ಬಾಬು ಜಗಜೀವನ್ ರಾಮ್: ಡಾ. ಗಂಗಾಧರ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್   |  ಶಂಕರಘಟ್ಟ  |

ಹಿಂದೂ ಧರ್ಮದೊಳಗಿನ ಅಸಮಾನತೆ, ಅಸ್ಪೃಷ್ಯತೆ, ಧರ್ಮ ಮೇಲಾಟದ ದೌರ್ಜನ್ಯಗಳನ್ನು ಸ್ವತಃ ಅನುಭವಿಸಿದ್ದ ಡಾ. ಬಾಬು ಜಗಜೀವನ್ ರಾಮ್, ಅವುಗಳನ್ನು ಸಾತ್ವಿಕವಾಗಿ ಪ್ರತಿಭಟಿಸುವ ಮಾರ್ಗವನ್ನು ಅನುಸರಿಸಿದ ಸಮಾಜ ಸುಧಾರಕ ಎಂದು ಬೆಂಗಳೂರು ವಿವಿಯ ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಸಂಚಾಲಕರಾದ ಡಾ. ಬಿ ಗಂಗಾಧರ್ ಅವರು ಅಭಿಪ್ರಾಯಪಟ್ಟರು.

ಕುವೆಂಪು ವಿವಿಯ Kuvempu University ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು ಬುಧವಾರ ಪ್ರೊ. ಎಸ್. ಪಿ. ಹಿರೇಮಠ್ ಸಭಾಂಗಣದಲ್ಲಿ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನ್ ರಾಮ್ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾಜದೊಳಗಿನ ಶೋಷಣೆಗಳನ್ನು ಡಾ. ಬಿ. ಆರ್. ಅಂಬೇಡ್ಕರ್ ಅವರು ಗಟ್ಟಿದನಿಯಲ್ಲಿ ಒಗ್ಗೂಡಿದ ಹೋರಾಟಕ್ಕೆ ಮುಂದಾಗುವ ಹಾದಿ ತುಳಿಯುವವರಾಗಿದ್ದರೆ, ಡಾ. ಬಾಬು ಜಗಜೀವನ್ ರಾಮ್ ಅವರು ಅವುಗಳಿಂದ ವೈಯಕ್ತಿಕವಾಗಿ ದೂರು ಉಳಿದು ತಮ್ಮ ಪ್ರತಿಭೆ, ಸಾಮರ್ಥ್ಯದ ಆಧಾರದಲ್ಲಿ ಪ್ರತಿಭಟಿಸುತ್ತಿದ್ದರು. ಜಾತಿ ಶೋಷಣೆಗೆ ಒಳಗಾದರೂ ಸಹ ಮೇಲ್ವರ್ಗಗಳ ವಿರುದ್ಧ ದ್ವೇಷ ಬೆಳೆಸಿಕೊಳ್ಳದ ಅವರು, ದಲಿತರು ಶಿಕ್ಷಣ ಪಡೆದು ಸ್ವಾಭಿಮಾನಿಗಳಾಗಿ ಸ್ವಸಾಮರ್ಥ್ಯದ ಆಧಾರದಲ್ಲಿ ಮೇಲೆ ಬರಬೇಕು ಎಂದು ಪ್ರತಿಪಾದಿಸಿದರು ಮತ್ತು ಅನುಸರಿಸಿದವರು ಎಂದು ತಿಳಿಸಿದರು.

ಡಾ. ಬಾಬೂಜಿ ಅವರು ಭಾರತ ಸರ್ಕಾರದ ಕೃಷಿ, ಕಾರ್ಮಿಕ, ನಾಗರೀಕ ವಿಮಾನಯಾನ, ರೇಲ್ವೇ ಸೇರಿದಂತೆ ಹತ್ತಾರು ಸಚಿವಾಲಯಗಳನ್ನು ನಿಭಾಯಿಸಿ, ಉಪಪ್ರಧಾನಿಯಾಗಿ ಜನಪರ ಕಾರ್ಯಗಳನ್ನು ಕೈಗೊಂಡರು. ಸ್ವಾತಂತ್ರೋತ್ತರ ಭಾರತ ನಿರ್ಮಾಣಕಾರರು ಮತ್ತು ಸಮಾಜ ಸುಧಾರಕರ ಸಾಲಿನಲ್ಲಿ ಕೆಲವೇ ಮಹನೀಯರನ್ನು ನೆನೆಯುವ ಪರಿಪಾಠ ಭಾರತದಲ್ಲಿದೆ. ಡಾ. ಜಗಜೀವನ್ ರಾಮ್ ಅವರನ್ನು ಒಂದು ಜಾತಿಗೆ ಸೀಮಿತಗೊಳಿಸುವ ಹುನ್ನಾರಗಳು ನಡೆದಿದ್ದು, ಪ್ರಸ್ತುತದ ವಿದ್ಯಾರ್ಥಿಗಳು ಅವರನ್ನು ಅಧ್ಯಯನಿಸುವ ಮೂಲಕ ಭಾರತದ ಶ್ರೇಷ್ಠ ನಾಯಕನೊಬ್ಬನನ್ನು ಅಮರರನ್ನಾಗಿಸಬೇಕು ಎಂದು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

Also read: ಉಕ್ರೇನ್ ನಲ್ಲಿ ಮೃತಪಟ್ಟ ನವೀನ್ ನಿವಾಸಕ್ಕೆ ಸಿದ್ದರಾಮಯ್ಯ ಭೇಟಿ

ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ ಮಾತನಾಡಿ, ಆಹಾರೋತ್ಪನ್ನಗಳ ಕೊರತೆಯ ಸಮಸ್ಯೆಯಿದ್ದ ಭಾರತವನ್ನು, ಹಸಿರು ಕ್ರಾಂತಿಯ ಮೂಲಕ ಬೇಳೆಕಾಳುಗಳ, ಆಹಾರೋತ್ಪನ್ನಗಳ ಯತೇಚ್ಛ ಶೇಖರಣೆ ಮಾಡಬಲ್ಲ ಸಶಕ್ತ ಭಾರತವನ್ನು ನಿರ್ಮಿಸಿದರು. ಸ್ವಾತಂತ್ರ ಹೋರಾಟದಲ್ಲಿ ಭಾಗವಹಿಸಿದ ಭಾರತದ ಎಲ್ಲ ತಳಸಮುದಾಯಗಳ ಪ್ರತಿನಿಧಿಯಾಗಿ ಡಾ. ಬಾಬು ಜಗಜೀವನ್ ರಾಮ್ ಭಾರತ ಸರ್ಕಾರದಲ್ಲಿ ಹಲವು ದಶಕಗಳ ಕಾಲ ಸೇವೆ ಸಲ್ಲಿಸಿದರು ಎಂದು ತಿಳಿಸಿದರು. ಕೃಷಿ ಸಚಿವರಾಗಿ ಡಾ. ಬಾಬು ಜಗಜೀವನ್ ರಾಮ್ ಪಾತ್ರ ವಿಷಯ ಕುರಿತು ಕನ್ನಡ ಭಾರತಿಯ ಡಾ. ನೆಲ್ಲಿಕಟ್ಟೆ ಸಿದ್ದೇಶ್ ವಿಚಾರ ಮಂಡಿಸಿದರು.

ಈ ಸಂದರ್ಭದಲ್ಲಿ ಮುಖ್ಯಅತಿಥಿಗಳಾಗಿ ವಿವಿಯ ಕುಲಸಚಿವೆ ಜಿ ಅನುರಾಧ, ಡಾ. ಬಾಬು ಜಗಜೀವನ್ ರಾಮ್ ಅಧ್ಯಯನ ಕೇಂದ್ರದ ಸಂಯೋಜನಾಧಿಕಾರಿ ಡಾ. ಸತ್ಯಪ್ರಕಾಶ್ ಎಂ. ಆರ್., ಪ್ರೊ. ರಾಮೇಗೌಡ, ಪ್ರೊ. ಗುರುಲಿಂಗಯ್ಯ, ಡಾ. ಬಿ. ತಿಪ್ಪೇಸ್ವಾಮಿ, ಡಾ. ಬಿ. ಎಚ್. ಅಂಜನಪ್ಪ, ಡಾ. ವೆಂಕಟೇಶ್, ಡಾ. ಉದ್ದಗಟ್ಟಿ ವೆಂಕಟೇಶ್, ಡಾ. ಹಸೀನಾ ಹಾಗೂ ವಿವಿಯ ಅಧ್ಯಾಪಕೇತರ ನೌಕರರ ಸಂಘದ ಶ್ರೀನಿವಾಸ್, ಡಾ. ಅಣ್ಣಯ್ಯ, ವಿವಿಧ ವಿಭಾಗಗಳ ಉಪನ್ಯಾಸಕರು, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಹಾಜರಿದ್ದರು.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ:
Whatsapp: 9008761663, 9481252093 – info@kalpa.news

Tags: Kannada NewsKannada News LiveKannada News OnlineKannada News WebsiteKannada WebsiteKuvempu UniversityLatest News KannadaLocal NewsMalnad NewsNews in KannadaNews KannadaShankaraghattaShimogaShivamoggaShivamogga Newsಕುವೆಂಪು ವಿವಿಮಲೆನಾಡು_ಸುದ್ಧಿಶಂಕರಘಟ್ಟಶಿವಮೊಗ್ಗ_ನ್ಯೂಸ್
Share200Tweet123Send
Previous Post

Scientists develop energy-efficient hydrogen production by urea electrolysis

Next Post

ಪಂಚರಾಜ್ಯ ಹಣಾಹಣಿ: ಉತ್ತರಪ್ರದೇಶ, ಉತ್ತರಾಖಂಡ್’ನಲ್ಲಿ ಕಮಲ, ಪಂಜಾಬ್’ನಲ್ಲಿ ಕೈ ಆರಂಭಿಕ ಮುನ್ನಡೆ

ಕಲ್ಪ ನ್ಯೂಸ್

ಕಲ್ಪ ನ್ಯೂಸ್

Next Post
Kalpa Breaking: ಭದ್ರಾವತಿ-ಇಂದು ರಾತ್ರಿ ಹಿಂದೂ ಫೈರ್ ಬ್ರಾಂಡ್ ಪ್ರಮೋದ್ ಮುತಾಲಿಕ್ ಭಾಷಣ!

ಪಂಚರಾಜ್ಯ ಹಣಾಹಣಿ: ಉತ್ತರಪ್ರದೇಶ, ಉತ್ತರಾಖಂಡ್’ನಲ್ಲಿ ಕಮಲ, ಪಂಜಾಬ್’ನಲ್ಲಿ ಕೈ ಆರಂಭಿಕ ಮುನ್ನಡೆ

Leave a Reply Cancel reply

Your email address will not be published. Required fields are marked *

  • Trending
  • Latest
ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

ಪೋಕ್ಸೋ ಪ್ರಕರಣ ಸಂತ್ರಸ್ತ ಬಾಲಕಿಗೆ ಗರ್ಭಪಾತ ಆರೋಪ: ವೈದ್ಯೆ ಅಮಾನತು

February 4, 2026
ಅರಸಾಳಿನಿಂದ ಶೃಂಗೇರಿ-ಚಿಕ್ಕಮಗಳೂರು ಮೂಲಕ ಹಾಸನ ರೈಲು ಸಂಪರ್ಕ | ಎಂಪಿ ರಾಘವೇಂದ್ರ ಹೇಳಿದ್ದೇನು?

ಯಶವಂತಪುರ-ಶಿವಮೊಗ್ಗ ರೈಲು ತಾಳಗುಪ್ಪಕ್ಕೆ ತಾತ್ಕಾಲಿಕ ವಿಸ್ತರಣೆ | ಶೀಘ್ರ ಆದೇಶ | ಎಂಪಿ ರಾಘವೇಂದ್ರ

January 29, 2026
ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

ಮಲೆನಾಡಿನಿಂದ ಕರಾವಳಿ, ಹುಬ್ಬಳ್ಳಿ ರೈಲು ಸಂಪರ್ಕ | ಶಿವಮೊಗ್ಗದಿಂದ ಈ ಎಲ್ಲಾ ಕಡೆಗಳಿಗೆ ನೂತನ ಮಾರ್ಗ?

January 16, 2026
ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

ತಾಳಗುಪ್ಪ-ಬೆಂಗಳೂರು ರೈಲಿನಲ್ಲಿ ದರೋಡೆಕೋರನ ದಾಂಧಲೆ | ಮಾರಕಾಸ್ತ್ರದಿಂದ ಹಲ್ಲೆ ಯತ್ನ

February 12, 2026
ಪೊಂಗಲ್ ಹಬ್ಬದ ಪ್ರಯುಕ್ತ ಕೊಟ್ಟಾಯಂ – ಬೆಂಗಳೂರು ಕ್ಯಾಂಟೋನ್ಮೆಂಟ್ ನಡುವೆ ವಿಶೇಷ ರೈಲು ಸಂಚಾರ

ಈ ಎಲ್ಲಾ ದಿನಗಳು ಮೈಸೂರು-ಶಿವಮೊಗ್ಗ ಎಕ್ಸ್’ಪ್ರೆಸ್, ಅರಸೀಕೆರೆ ರೈಲುಗಳ ಬಿಗ್ ಅಪ್ಡೇಟ್

February 6, 2026
ಅಶಕ್ತರಿಗೆ ಕಾನೂನಿನ ನೆರವು ಸಿಗಬೇಕು: ನ್ಯಾ.ಎಂ.ಎಸ್. ಸಂತೋಷ್

ಅಶಕ್ತರಿಗೆ ಕಾನೂನಿನ ನೆರವು ಸಿಗಬೇಕು: ನ್ಯಾ.ಎಂ.ಎಸ್. ಸಂತೋಷ್

March 10, 2026
ಯುವ ಸಂಸತ್ ಸ್ಪರ್ಧೆ | 10 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

ಯುವ ಸಂಸತ್ ಸ್ಪರ್ಧೆ | 10 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

March 10, 2026
ಮುಸಲ್ಮಾನ ಗೂಂಡಾಗಳಿಗೆ ಕಾಂಗ್ರೆಸ್ ಸರ್ಕಾರ ಬೆಂಬಲ ನೀಡುತ್ತಿರುವುದೇ ಗಲಭೆಗೆ ಕಾರಣ | ಈಶ್ವರಪ್ಪ ಕಿಡಿ

ರಾಜ್ಯ ಸರ್ಕಾರದ ಬಜೆಟ್ | ಚಿಂದಿ ಬಟ್ಟೆ ಸೇರಿಸಿ ಕೌದಿ ಹೊಲೆದ ಹಾಗೆ ಆಗಿದೆ: ಈಶ್ವರಪ್ಪ ಲೇವಡಿ

March 10, 2026
ಅರ್ಥಗರ್ಭಿತ ಮಹಿಳಾ ದಿನಾಚರಣೆ: ಎಸ್‌ಪಿ ನಿಖಿಲ್ ಸಂತಸ

ಅರ್ಥಗರ್ಭಿತ ಮಹಿಳಾ ದಿನಾಚರಣೆ: ಎಸ್‌ಪಿ ನಿಖಿಲ್ ಸಂತಸ

March 10, 2026
ಪಿಇಎಸ್ ಐಎಎಮ್‌ಎಸ್ ಪದವಿ ಕಾಲೇಜಿನ ರಾಸೇಯೋ ವಿಶೇಷ ಶಿಬಿರ | ಉಚಿತ ಆರೋಗ್ಯ ತಪಾಸಣೆ ಸಂಪನ್ನ

ಪಿಇಎಸ್ ಐಎಎಮ್‌ಎಸ್ ಪದವಿ ಕಾಲೇಜಿನ ರಾಸೇಯೋ ವಿಶೇಷ ಶಿಬಿರ | ಉಚಿತ ಆರೋಗ್ಯ ತಪಾಸಣೆ ಸಂಪನ್ನ

March 10, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL