ಕಲ್ಪ ಮೀಡಿಯಾ ಹೌಸ್ | ಶಂಕರಘಟ್ಟ |
ಪ್ರಾಚೀನ ಭಾರತದಲ್ಲಿ ಗಣಿತಶಾಸ್ತ್ರದಲ್ಲಿ ಯತೇಚ್ಛ ವಿದ್ವತ್ತು ಮತ್ತು ವಿದ್ವಾಂಸರು ಲಭ್ಯವಿದ್ದರು. ಜಾಗತಿಕ ಗಣಿತ ವಿಜ್ಞಾನ ಜ್ಞಾನ ಶಾಖೆಗೆ ಭಾರತ ನೀಡಿರುವ ಕೊಡುಗೆಗೆ ವಿಶ್ವಮಟ್ಟದಲ್ಲಿ ಮನ್ನಣೆ ದೊರೆತಿಲ್ಲ ಎಂದು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಢದ ವಿಶ್ರಾಂತ ಕುಲಪತಿ ಪ್ರೊ. ವಾಲಿಕರ್ ತಿಳಿಸಿದರು.
ಕುವೆಂಪು ವಿವಿಯ #Kuvempu University ಗಣಿತ ವಿಜ್ಞಾನ ವಿಭಾಗವು ರಾಷ್ಟ್ರೀಯ ಗಣಿತ ದಿನದ ಅಂಗವಾಗಿ ಆಯೋಜಿಸಿರುವ ಉಪನ್ಯಾಸ ಸರಣಿಯನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕ್ರಿಸ್ತಪೂರ್ವ ಕಾಲದಲ್ಲಿಯೇ ಭಾರತದಲ್ಲಿ ಅತ್ಯುತ್ತಮ ಗಣಿತ ಜ್ಞಾನವನ್ನು ಭಾಸ್ಕಾರಾಚಾರ್ಯ, ಶ್ರೀಧರಾಚಾರ್ಯ, ಬ್ರಹ್ಮಗುಪ್ತ, ಆರ್ಯಭಟರು ಶೋಧಿಸಿ ಜಗತ್ತಿಗೆ ತಿಳಿಯುವಂತೆ ಬರೆದಿರಿಸಿದ್ದರು. ಭಾರತಕ್ಕೆ ಪಾಶ್ಚಿಮಾತ್ಯ ರಾಷ್ಟ್ರಗಳ ಆಕ್ರಮಣ, ಆಗಮನದ ನಂತರ ಭಾರತೀಯ ಗಣಿತ ಜ್ಞಾನ ಮೂಲೆಗುಂಪಾಗಿದ್ದು ಕಂಡುಬಂದಿದೆ ಎಂದು ಅವರು ನುಡಿದರು.
ವಿಭಾಗದ ಅಧ್ಯಕ್ಷ ಪ್ರೊ. ವೆಂಕಟೇಶ್ ಮಾತನಾಡಿ, ಭಾರತದ ಶ್ರೇಷ್ಠ ಗಣಿತಜ್ಞ ರಾಮಾನುಜಂ ಅವರು ಭಾರತೀಯ ಗಣಿತಶಾಸ್ತ್ರಕ್ಕೆ ಮರುಚೇತನ ನೀಡಲು ಪ್ರಯತ್ನಿಸಿದರಾದರೂ ಅದು ಸಂಪೂರ್ಣಗೊಂಡಿಲ್ಲ. ಇದನ್ನು ಸರಿಪಡಿಸಿಕೊಂಡು ಭಾರತೀಯ ಪರಂಪರೆಯ ಹಿನ್ನೆಲೆಯುಳ್ಳ ಗಣಿತ ವಿಜ್ಞಾನ ಅಧ್ಯಯನಕ್ಕೆ ಇದು ಸೂಕ್ತ ಕಾಲ ಎಂದರು.
ಈ ಸಂದರ್ಭದಲ್ಲಿ ವಿವಿಯ ಕುಲಪತಿ ಪ್ರೊ. ಬಿ. ಪಿ. ವೀರಭದ್ರಪ್ಪ, ಡಾ. ಬಿ. ಜೆ. ಗಿರೀಶ್, ಡಾ. ನರಸಿಂಹಮೂರ್ತಿಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post