ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ತಾಲೂಕಿನ ಎಳನೀರುಕೊಪ್ಪ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನಡೆದಿಲ್ಲ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕ್ಷಣ ಸಚಿವರ ತವರು ಜಿಲ್ಲೆಯಾಗಿದ್ದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರ ಕ್ಷೇತ್ರ ಶಿಕಾರಿಪುರ ತಾಲೂಕಿನಲ್ಲಿ ಸ್ವತಂತ್ರ ದಿನಾಚರಣೆಯ ದಿನ ಸ್ವತಂತ್ರ ದಿನಾಚರಣೆಗೆ ಅಪಮಾನವಾಗಿದೆ.
ಎಳನೀರುಕೊಪ್ಪ ಶಾಲೆಯಲ್ಲಿ ಇಂದು ಸ್ವಾತಂತ್ರ್ಯ ದಿನಾಚರಣೆ ಇದ್ದರು ಶಾಲಾ ಶಿಕ್ಷಕಿ ಲಲಿತಾ ಧ್ವಜರೋಹಣ ಮಾಡಿಲ್ಲ. ಶಾಲೆಗೆ ಆಗಮಿಸಿಲ್ಲ ಎಂದು ಎಸ್ ಡಿಎಂಸಿ ಅಧ್ಯಕ್ಷ ಪ್ರಕಾಶ್ ನಾಯ್ಕ್ ಆರೋಪಿಸಿದ್ದಾರೆ.
Also read: ರಾಷ್ಟ್ರದ ರಕ್ಷಣೆಗೆ ಸದಾ ಸಿದ್ಧರಾಗಬೇಕು: ತಹಶೀಲ್ದಾರ್ ಹುಸೇನ್ ಸರಕಾವಸ್ ಕರೆ
ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಶಶಿಧರ್ ಮಾತನಾಡಿ, ಧ್ವಜಾರೋಹಣ ನಡೆಸಿದ್ದಾರೆ. ಶಾಲೆಯ ಧ್ವಜದ ಕಟ್ಟೆ ಸರಿ ಇಲ್ಲದ ಕಾರಣ ಪಕ್ಕದಲ್ಲಿ ಇರುವ ಅಂಗನವಾಡಿ ಕೇಂದ್ರದಲ್ಲಿ ಶಾಲಾ ಶಿಕ್ಷಕಿ ಮಕ್ಕಳೊಂದಿಗೆ ಧ್ವಜಾರೋಹಣ ನಡೆಸಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ
ಎಸ್‌ಡಿಎಂಸಿ ಅಧ್ಯಕ್ಷ ಶಂಕರ್‌ನಾಯ್ಕ್ ಮಾತನಾಡಿ, ಧ್ವಜದ ಕಟ್ಟೆ ಗಟ್ಟಿಮುಟ್ಟಾಗಿ ಇದ್ದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ. ದ್ವಜದ ಕಟ್ಡೆ ಭದ್ರವಾಗಿದೆ. ನಾನು ಬೆಳಗ್ಗೆಯಿಂದ ಶಿಕ್ಷಕಿಗೆ ದೂರವಾಗಿ ಕರೆ ಮಾಡಿದರು. ಅವರು ಸ್ಪಂದಿಸಿಲ್ಲ ಶಿಕ್ಷಕಿ ಶಿವಮೊಗ್ಗದಲ್ಲಿ ವಾಸವಿದ್ದು ಸ್ವಾತಂತ್ರ್ಯ ದಿನಾಚರಣೆಗೆ ಬಾರದೆ ದೇಶಕ್ಕೆ ಅಪಮಾನ ಮಾಡಿದ್ದಾರೆ ಈ ಬಗ್ಗೆ ಬಿ.ಇಓ ಗೆ ದೂರು ನೀಡಲಾಗಿದೆ ಎಂದಿದ್ದಾರೆ.


ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















