ಕಲ್ಪ ಮೀಡಿಯಾ ಹೌಸ್ | ಸುಣ್ಣದಕೊಪ್ಪ / ಶಿಕಾರಿಪುರ |
ಮಠ ಮಂದಿರಗಳು ನಮ್ಮ ಧರ್ಮವನ್ನು ಅನೇಕ ವರ್ಷದಿಂದ ಕಾಪಾಡುತ್ತಿದೆ, ಇಂದು ಶ್ರೀ ಶಿದ್ದರಾಮೇಶ್ವರ ದೇವಸ್ಥಾನಕ್ಕೆ 20 ಲಕ್ಷ ಅನುದಾನ ನೀಡಿದ್ದರಿಂದ ಸುಂದರ ದೇವಾಲಯ ನಿರ್ಮಾಣವಾಗಿದೆ, ಶ್ರೀ ದೇವರ ಆಶೀರ್ವಾದದಿಂದ ಕೋವಿಡ್ ಮಹಾಮಾರಿ ದೂರವಾಗಿ ಅರೋಗ್ಯಕರ ಸಮಾಜ ಶ್ರೀಘ್ರದಲ್ಲಿ ನಿರ್ಮಾಣವಾಗಲಿದೆ ಎಂದು ಸಂಸದ ಬಿ. ವೈ. ರಾಘವೇಂದ್ರ ಅವರು ತಿಳಿಸಿದರು.
ಶಿಕಾರಿಪುರ ತಾಲೂಕಿನ ಸುಣ್ಣದಕೊಪ್ಪ ಗ್ರಾಮದ ಶ್ರೀ ಶಿದ್ದರಾಮೇಶ್ವರ ದೇವರ ನೂತನ ದೇವಸ್ಥಾನದ ಉದ್ಘಾಟನಾ ಸಮಾರಂಭ ಹಾಗೂ ಶ್ರೀ ಶಿವಯೋಗಿ ಶ್ರೀ ಶಿದ್ಧರಾಮೇಶ್ವರ ಜಯಂತೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಹೊಸೂರು ಉಡುಗಣಿ -ತಾಳಗುಂದ ಹೋಬಳಿಯಲ್ಲಿ 256 ಕೆರೆಗಳಿಗೆ ನೀರನ್ನು ಹರಿಸಿ ನೀರಿನ ಸಮಸ್ಯೆಯನ್ನು ದೂರ ಮಾಡಿ ಸನ್ಮಾನ್ಯ ಯಡಿಯೂರಪ್ಪನವರು ಜೀವನ ಕಟ್ಟುವ ಕೆಲಸ ಮಾಡಿದ್ದಾರೆ, ನರೇಂದ್ರ ಮೋದಿಯವರು ಜನೆತೆಗೆ ಅನುಕೂಲವಾಗುವ ನಿಟ್ಟಿನಲ್ಲಿ ಮನೆ ಮನೆ ಗಂಗೆ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಶಿರಾಳಕೊಪ್ಪದಲ್ಲಿ 20 ಹಾಸಿಗೆ ಇದ್ದ ಸರ್ಕಾರಿ ಆಸ್ಪತ್ರೆಯನ್ನು 50 ಹಾಸಿಗೆ ಸಾಮರ್ಥ್ಯ ಮಾಡಲಾಗುತ್ತಿದೆ. ಆರೋಗ್ಯ, ಸ್ವಚ್ಛತೆಗೆ ಆದ್ಯತೆಯನ್ನು ನೀಡಿ ನಮ್ಮ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಉತ್ತಮ ಆಡಳಿತವನ್ನು ನೀಡುತ್ತಿದೆ’ ಎಂದರು.
ವೀರಕ್ತ ಮಠದ ಶ್ರೀಗಳಾದ ಚನ್ನಬಸವ ಸ್ವಾಮೀಜಿ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಗುರುಮೂರ್ತಿಯವರು, ಮಾಲತೇಶ್, ಸಿದ್ದರಾಮಪ್ಪ ಹಿರೇಜಂಬೂರು, ಸವಿತಾ ಶಿವಕುಮಾರ್ ಮತ್ತಿತರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post