ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಶಿಕಾರಿಪುರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿ ಜೊತೆಗೆ ಬದುಕು ಕಟ್ಟುವ ಕೆಲಸವನ್ನು ನಿಕಟಪೂರ್ವ ಮುಖ್ಯಮಂತ್ರಿ ಯಡಿಯೂರಪ್ಪ CM Yadiyurappa ಮಾಡಿದ್ದಾರೆ ಎಂದು ಸಂಸದ ಬಿ. ವೈ ರಾಘವೇಂದ್ರ MP Raghavendra ತಿಳಿಸಿದರು.
ಸೋಮವಂಶ ಆರ್ಯ ಕ್ಷತ್ರಿಯಾ(ಚಿತ್ರಗಾರ್) ಸಮಾಜದ ಸಮುದಾಯ ಭವನದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಒಬ್ಬ ವ್ಯಕ್ತಿಗೆ ಮೀನು ಕೊಡುವ ಬದಲು ಮೀನು ಹಿಡಿಯುವುದನ್ನು ಹೇಳಿಕೊಟ್ಟರೆ ಅವನ ಬದುಕು ಹಸನಾಗುತ್ತದೆ, ಈ ರೀತಿಯಲ್ಲಿ ಇಲ್ಲಿನ ಶಾಸಕರಾದ ಯಡಿಯೂರಪ್ಪನವರು ಶಿಕಾರಿಪುರದ ಜಕಣಾಚಾರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಸ್ವತಂತ್ರ್ಯ ಪೂರ್ವದಲ್ಲೇ ಮೊದಲ ರೈಲ್ವೆ ಯೋಜನೆ, ನೀರಾವರಿ ಯೋಜನೆ, ಆರೋಗ್ಯ ಕ್ಷೇತ್ರಕ್ಕಾಗಿ ಆಸ್ಪತ್ರೆಗಳು, ನ್ಯಾಷನಲ್ ಹೈವೇ, ಪ್ರವಾಸಿ ತಾಣದ ಅಭಿವೃದ್ಧಿ, ಶಿವಮೊಗ್ಗದಲ್ಲಿ ವಿಮಾನ ನಿಲ್ದಾಣ ಹೀಗೆ ಹತ್ತು ಹಲವು ಯೋಜನೆಗಳನ್ನು ಜನತೆಗೆ ನೀಡಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಶಿಕಾರಿಪುರ ಅಧ್ಯಕ್ಷರಾದ ರೇಖಾಬಾಯಿ, ಮಂಜುನಾಥ ಸಿಂಗ್, ಪುರಸಭೆ ಸದಸ್ಯರಾದ ಗುರುರಾಜ್ ಜಗತಾಪ್, ಪಾಲಾಕ್ಷಿ, ಬೆಣ್ಣೆ ದೇವೇಂದ್ರಪ್ಪ, ರೇಣುಕ ಸ್ವಾಮಿ, ಜಕಣಾಚಾರ್ಯ ಪ್ರಶಸ್ತಿ ವಿಜೇತರಾದ ಶಿಲ್ಪಿ ಕಾಶಿನಾಥ್, ಸಮಾಜ ಅಧ್ಯಕ್ಷರಾದ ಪರಶುರಾಮ ಪೌಣಾರ ಸಮಾಜದ ಬಂಧುಗಳು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post