ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಯುವ ರೈತರ ಪ್ರಮುಖ ಸಮಸ್ಯೆಯಾಗಿ ಕಾಡುತ್ತಿರುವ ವೈವಾಹಿಕ ಸಂಬಂಧಗಳ ಜಟಿಲತೆಯಿಂದಾಗಿ ಕೃಷಿ ಪ್ರಯೋಗಗಳು, ಕೃಷಿ ತಲ್ಲೀನತೆ ಕುಂಠಿತಗೊಂಡಿರುವುದು ಆತಂಕಕಾರಿ ಸಂಗತಿ ಎಂಬ ಒಕ್ಕೊರಲ ಹತಾಶೆ ಅಭಿಪ್ರಾಯ ಮುಗಳಗೆರೆ ರೈತ ಸಮೂಹದಿಂದ ವ್ಯಕ್ತವಾಯಿತು.
ಶಿಕಾರಿಪುರ ತಾಲ್ಲೂಕಿನ ಹಳೇಮುಗಳಗೆರೆ ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಇರುವಕ್ಕಿ ಕೃಷಿ ವಿಜ್ಞಾನ ಮಹಾವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರ್ಯಾನುಭವ ಸಂವಾದ ಕಾರ್ಯಕ್ರಮ ಜರುಗಿತು.
Also read: ಭದ್ರಾವತಿ | ಆರ್ಥಿಕ ಸುಧಾರಣೆಯ ಹರಿಕಾರ ಮನಮೋಹನ ಸಿಂಗ್ ಅವರಿಗೆ ನೋಟುಗಳ ಮೂಲಕ ಸಂತಾಪ
ಜಾಗತೀಕರಣದ ನಾಗಲೋಟದಲ್ಲಿ ಕೃಷಿ ಕುಟುಂಬಗಳು ಹಿಂದೆ ಬಿದ್ದಿದ್ದು, ಕೃಷಿಯೆಂಬುದೆ ಅನುಪಯುಕ್ತ ಕಾರ್ಯ ಎಂಬಂತಾಗಿದೆ. ಹಾಗಾಗಿ, ಶಿಕ್ಷಣದಲ್ಲಿ ಮುಂದಿರುವ ಹೆಣ್ಣುಮಕ್ಕಳು ಕೃಷಿ ಯುವಕನನ್ನು ವರಿಸಲು ಮುಂದೆ ಬರುತ್ತಿಲ್ಲ. ಪ್ರಸ್ತುತ ಕೇವಲ ಮದುವೆ ಸಮಸ್ಯೆ ಎಂದಾದರೂ ಭವಿಷ್ಯದಲ್ಲಿ ಕೃಷಿ ಕುಟುಂಬದ ಅಭದ್ರತೆಗೆ ಕಾರಣವಾಗುವ ಈ ಸಮಸ್ಯೆಗೆ ಆದಷ್ಟು ತ್ವರಿತವಾಗಿ ಪರಿಹಾರ ಕೊಂಡುಕೊಳ್ಳಬೇಕು. ಸರ್ಕಾರ ಈ ನಿಟ್ಟಿನಲ್ಲಿ ಯೋಚಿಸಬೇಕು. ಅನ್ನದ ಕೊರತೆ ಬರುವ ಮುನ್ನ ಎಚ್ಚೆತ್ತುಕೊಳ್ಳಬೇಕು ಎಂಬ ಮಹತ್ವದ ನಿರ್ಣಯ ವ್ಯಕ್ತವಾಯಿತು.
ರಾಷ್ಟ್ರೀಯ ರೈತರ ದಿನಾಚಾರಣೆ ಅಂಗವಾಗಿ ರೈತರಿಗೆ ನಮನವನ್ನು ಸಲ್ಲಿಸಿ ಶುಭಾಷಯಗಳನ್ನು ಕೋರಲಾಯಿತು. ರೈತನ ದಿನನಿತ್ಯದ ಬದುಕಿನಲ್ಲಿ ತಾನು ಪಡುವ ಸಮಸ್ಯೆಗಳು ಅವನ ಕಷ್ಟಗಳ ಕುರಿತ ವಿಷಯಗಳು ಪ್ರಕಟವಾದವು. ರೈತರ ದಿನವು ಭಾರತದ ಆರ್ಥಿಕತೆ, ಗ್ರಾಮೀಣಾಭಿವೃದ್ಧಿ ಮತ್ತು ಆಹಾರ ಭದ್ರತೆಯನ್ನು ಕಾಪಾಡುವಲ್ಲಿ ರೈತರ ಪ್ರಮುಖ ಪಾತ್ರವನ್ನು ಪ್ರತಿಬಿಂಬಿಸುತ್ತದೆ. ನ್ಯಾಯಯುತ ಬೆಲೆ, ಹವಾಮಾನ ಬದಲಾವಣೆಯ ಹೊಂದಾಣಿಕೆ, ಸುಸ್ಥಿರ ಕೃಷಿ ಪದ್ಧತಿಗಳು ಮತ್ತು ಆಧುನಿಕ ತಂತ್ರಜ್ಞಾನಗಳ ಪ್ರವೇಶದಂತಹ ಪ್ರಮುಖ ಅಂಶಗಳು ರೈತನು ಅರಿತು ಸಮಸ್ಯೆಗಳು ಅನುಗುಣವಾಗಿ ಬೆಳೆ ಬೆಳೆಯಬೇಕು, ಕೃಷಿಯಲ್ಲಿ ವೈಜ್ಞಾನಿಕ ಮತ್ತು ತಾಂತ್ರಿಕ ಆವಿಷ್ಕಾರಗಳು ಪರಿಚಯಿಸುವಲ್ಲಿ ಸರ್ಕಾರ ಮುಂದಾಗಬೇಕು ಎಂಬ ಒಟ್ಟಾರೆ ಅಭಿಪ್ರಾಯ ರೈತರ, ಕೃಷಿ ವಿದ್ಯಾರ್ಥಿಗಳ ನಿಕುವಾಗಿತ್ತು.
ಗ್ರಾಮದ ರೈತ ಮುಖಂಡರು, ಕೃಷಿಕರು, ಕೃಷಿ ಆಸಕ್ತರು ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post