ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬಕ್ಕೆ ಪಕ್ಷದ ಕಾರ್‍ಯಕರ್ತರು ಕೇಕ್‌ಕತ್ತರಿಸಿ, ಪಟಾಕಿ ಸಿಡಿಸಿ ಸಂಭ್ರಮಿಸದೆ ಜನಪರ ಕಾರ್‍ಯದ ಮೂಲಕ ನಾಗರೀಕರ ಮೆಚ್ಚುಗೆ ಪಡೆಯುವ ಕೆಲಸ ಮಾಡುತ್ತಿದೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ವಿರೇಂದ್ರ ಪಾಟೀಲ್ ಹೇಳಿದರು.

ತಾಲೂಕಿನ ಕಪ್ಪನಹಳ್ಳಿ ಗ್ರಾಮದಲ್ಲಿ ಬಿಜೆಪಿ ತಾಲೂಕು ಘಟಕ, ಶಂಕರ್ ಕಣ್ಣಿನ ಆಸ್ಪತ್ರೆ, ಲಯನ್ಸ್ ಕ್ಲಬ್ ಆಯೋಜಿಸಿದ್ದ ಉಚಿತ ಕಣ್ಣಿನ ತಪಾಸಣೆ ಶಿಬಿರ ಕಾರ್‍ಯಕ್ರಮದಲ್ಲಿ ಅವರು ಮಾತನಾಡಿದರು.
238 ಜನರು ತಪಾಸಣೆ ಮಾಡಿದ್ದು 97 ಜನರಿಗೆ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿದೆ. ಇದೇ ತಿಂಗಳ 28ರಂದು ಮಟ್ಟಿಕೋಟೆ ಗ್ರಾಮದಲ್ಲಿ ಕಣ್ಣಿನ ತಪಾಸಣೆ ಶಿಬಿರ ಆಯೋಜಿಸಲಾಗಿದೆ.


ಸುಣ್ಣದಕೊಪ್ಪ ಗ್ರಾಮದಲ್ಲಿ ರಕ್ತದಾನ ಶಿಬಿರದಲ್ಲೂ ನೂರಾರು ಜನ ಯುವಕರು ರಕ್ತದಾನ ಮಾಡಿದ್ದಾರೆ. ಪ್ರತಿ ಹಳ್ಳಿಯಲ್ಲೂ ಜನರು ಕೊರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳುವುದಕ್ಕೆ ಸಹಕಾರಿ ಆಗುವ ಕಾರ್‍ಯದಲ್ಲಿ ನಮ್ಮ ಕಾರ್‍ಯಕರ್ತರು ತೊಡಗಿಸಿಕೊಂಡಿದ್ದಾರೆ. ಶಿರಾಳಕೊಪ್ಪ, ಶಿಕಾರಿಪುರ ಸರಕಾರಿ ಆಸ್ಪತ್ರೆಯಲ್ಲಿ ರೋಗಿಳಿಗೆ ಬ್ರೆಡ್, ಹಣ್ಣು ವಿತರಣೆ ಮೂಲಕ ಮೋದಿ ಜನ್ಮದಿನ ಆಚರಿಸಿದ್ದಾರೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಯಾವುದೆ ಹಗರಣ ಆಗಿಲ್ಲ ಜನರಿಗೆ ನೇರವಾಗಿ ಖಾತೆಗೆ ಅನುದಾನ ಹಣ ಬರುತ್ತಿದೆ ಹಲವು ಅಭಿವೃದ್ಧಿ ಕಾರ್‍ಯ ಜನಮೆಚ್ಚುಗೆ ಪಡೆದಿವೆ. ದೇಶದಲ್ಲಿ ಭಯೋತ್ಪಾದಕ ಕೃತ್ಯ ನಡೆದಿಲ್ಲ ಅದೆಲ್ಲವೂ ದೇಶದ ಅಭಿವೃದ್ಧಿಗೆ ಕಾರಣವಾಗಿದೆ ಅದಕ್ಕಾಗಿ ತಾಲೂಕಿನಲ್ಲಿ ಪ್ರಧಾನಿಗೆ ಅಭಿನಂದನಾ ಪತ್ರ ಅಭಿಯಾನ ಆಯೋಜಿಸಿ ಈಗಾಗಲೆ ಸಾವಿರಕ್ಕೂ ಹೆಚ್ಚು ಪತ್ರ ಕಳುಹಿಸಲಾಗಿದೆ. ದೇಶದ ಅಭ್ಯುದಯಕ್ಕೆ ಪುನಃ ಬಿಜೆಪಿ ಪಕ್ಷಕ್ಕೆ ಅಧಿಕಾರ ನೀಡುವುದು ಅಗತ್ಯ ಎಂದು ಹೇಳಿದರು.

ಎಂಎಡಿಬಿ ಅಧ್ಯಕ್ಷ ಕೆ.ಎಸ್.ಗುರುಮೂರ್ತಿ ಆರೋಗ್ಯ ಕಾರ್‍ಯಕರ್ತರಿಗೆ, ವೈದ್ಯರಿಗೆ ಸನ್ಮಾನಿಸಿದರು. ಶಂಕರ ಕಣ್ಣಿನ ಆಸ್ಪತ್ರೆ ವೈದ್ಯರು, ಸಿಬ್ಬಂದಿ, ಲಯನ್ಸ್ ಕ್ಲಬ್ ಪದಾಧಿಕಾರಿಗಳು, ಬಿಜೆಪಿ ಪದಾಧಿಕಾರಿಗಳಾದ ಸಿದ್ಧಲಿಂಗಪ್ಪ, ಗಾಯಿತ್ರಿದೇವಿ, ಕೆ.ಹಾಲಪ್ಪ, ಬಸವರಾಜ್ ಮಿಲ್ಟ್ರಿ, ಸತೀಶ್ ತಾಳಗುಂದ, ಶಿವರಾಜ್ ವಕೀಲರು, ಮಲ್ಲೇಶಪ್ಪ ಅಂಬಾರಗೊಪ್ಪ, ನಾಗರಾಜ್, ಬೆಣ್ಣೆ ಪ್ರವೀಣ್ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















