ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ರಾಜ್ಯದ ಜನತೆಗೆ ನೀವು ಗ್ಯಾರೆಂಟಿ ಕೊಡದೇ ಇದ್ದರೂ ಪರವಾಗಿಲ್ಲ, ಜೀವ ತೆಗೆಯಬೇಡಿ ಎಂದು ಶಾಸಕ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇನ್ನೂ ಒಂದು ದಿನ, ಇನ್ನೊಂದು ಕೊಲೆ ಎಂದಿರುವ ಅವರು, ಗ್ಯಾರೆಂಟಿ ಕೊಡದ್ದಿದ್ದರೂ ಪರವಾಗಿಲ್ಲ ಜೀವ ತೆಗೆಯಬೇಡಿ ಎಂದಿದ್ದಾರೆ.
ಕರ್ನಾಟಕದ ನಾಗರಿಕರಿಂದ ಕಾಂಗ್ರೆಸ್ ಸರ್ಕಾರಕ್ಕೆ ವಿನಮ್ರ ವಿನಂತಿಯೆಂದರೆ, ಇತರ ಖಾತರಿಗಳನ್ನು ತಲುಪಿಸಲಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ, ಜೀವನದ ಖಾತರಿ ಒದಗಿಸುವುದಾಗಿದೆ ಎಂದರು.
Also read: ಕುನೋ ನ್ಯಾಶನಲ್ ಪಾರ್ಕ್’ನಲ್ಲಿ ಮತ್ತೊಂದು ಚೀತಾ ಸಾವು: ಕಾರಣವೇನು?
ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಶಾಂತಿಯ ತೋಟದಲ್ಲಿ ನೆಮ್ಮದಿಯಿಂದ ಬದುಕಲು ಬಿಡಿ ಎಂದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















