ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯದ ಪ್ತರ್ಥಮ ಮತ್ತು ತೃತೀಯ ಸೆಮಿಸ್ಟರ್‌ನ ಕಲಾ ವಿಭಾಗದ ಪ್ರಶಿಕ್ಷಣಾರ್ಥಿಗಳಿಗಾಗಿ “ನಕ್ಷೆ ಬರೆಯುವ ಕಾರ್ಯಾಗಾರ” ವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮ ಸಂಪನ್ಮೂಲ ವ್ಯಕ್ತಿ ಚಂದ್ರಪ್ಪ ಕಲಾ ಶಿಕ್ಷಕರು, ಕುಮದ್ವತಿ ಶಿಕ್ಷಣ ಮಹಾವಿದ್ಯಾಲಯ ಇವರಿಂದ ಕಲಾ ವಿಭಾಗದ ಪ್ರಶಿಕ್ಷಣಾರ್ಥಿಗಳಿಗೆ ನಕ್ಷೆ ಬರೆಯುವ ಕೌಶಲವನ್ನು ಪ್ರಾಯೋಗಿಕವಾಗಿ ತರಬೇತಿ ನೀಡಿದರು.
ಕಾರ್ಯಾಗಾರದಲ್ಲಿ ಶ್ರೀ ಚಂದ್ರಪ್ಪ ಇವರು ಮಾತನಾಡುತ್ತಾ ಭೂಪಟ ರೇಖಾಚಿತ್ರ (ಕಾರ್ಟೋಗ್ರಫಿ)ವು ಭೌಗೋಳಿಕ ದತ್ತಾಂಶವನ್ನು ನಿಖರವಾಗಿ ಅಭಿವ್ಯಕ್ತಿಸಲು ತಾಂತ್ರಿಕ ನಿಖರತೆ, ಪ್ರಾದೇಶಿಕ ಅರಿವು ಮತ್ತು ಕಲಾತ್ಮಕ ಕೌಶಲ್ಯಗಳ ಸಂಯೋಜನೆಯ ಅಗತ್ಯವಿದೆ. ಪ್ರಮುಖ ಕೌಶಲ್ಯಗಳಲ್ಲಿ ಮಾಪಕವನ್ನು ಅರ್ಥಮಾಡಿಕೊಳ್ಳುವುದು, ದಿಕ್ಸೂಚಿ ನಿರ್ದೇಶನಗಳನ್ನು ಬಳಸುವುದು, ನಿಖರವಾದ ಬಾಹ್ಯರೇಖೆಗಳನ್ನು ಚಿತ್ರಿಸುವುದು, ಚಿಹ್ನೆಗಳೊಂದಿಗೆ ದಂತಕಥೆಗಳನ್ನು ರಚಿಸುವುದು, ಉಲ್ಲೇಖಗಳನ್ನು ಬಳಸುವುದು ಮತ್ತು ಬಾಹ್ಯರೇಖೆಗಳಂತಹ ಸ್ಥಳಾಕೃತಿಯ ವಿವರಗಳನ್ನು ಅನ್ವಯಿಸುವುದು ಮುಂತಾದ ಸಂಗತಿಗಳು ಸೇರುತ್ತವೆ ಎಂದರು.
ಕರ್ನಾಟಕ ಮತ್ತು ಭಾರತ ನಕ್ಷೆಯನ್ನು ಬರೆಯುವ ಸೃಜನಾತ್ಮಕ ತರಬೇತಿಯನ್ನು ನೀಡಿದರು. ನಕ್ಷೆಯನ್ನು ಬಿಡಿಸಲು ಬೇಕಾದ ಕೌಶಲ, ಬಣ್ಣದ ಆಯ್ಕೆ, ಬಿಡಿಸುವ ವಿಧಾನ ಮತ್ತು ಅಭಿವ್ಯಕ್ತಗೊಳಿಸುವ ಕಲೆಯನ್ನು ಅನಾವರಣಗೊಳಿಸಿದರೇ ನಕ್ಷೆಯನ್ನು ರಚಿಸುವ ಸೃಜನಾತ್ಮಕ ಮತ್ತು ಸರಳ ತಂತ್ರಗಳನ್ನು ಹೇಳಿಕೊಟ್ಟರು.
ಕಾರ್ಯಾಗಾರದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಡಾ. ಶಿವಕುಮಾರ್ ಜಿ ಎಸ್, ಕಲಾ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ದೇವರಾಜ ವೈ, ಡಾ. ವಾಣಿ ನಾಯಕಿ, ಕಾರ್ಯಕ್ರಮವನ್ನು ನಿರ್ವಹಿಸಿದರು.
ವಿದ್ಯಾರ್ಥಿಗಳು ಸಕ್ರೀಯವಾಗಿ ಪಾಲ್ಗೊಂಡು ನಕ್ಷೆಯ ರಚನೆಯನ್ನು ತಾವೇ ರಚಿಸುವುದರ ಮೂಲಕ ಆನಂದಿಸಿದರು. ಕಾಲೇಜಿನ ಬೋಧಕ ವರ್ಗದವರು ಉಪಸ್ಥಿತರಿದ್ದು ಉತ್ತಮವಾಗಿ ಮೂಡಿಬಂದಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















