ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ, ಕ್ಯಾನ್ಸರ್ ಪೀಡಿತರನ್ನು ಶುಶ್ರೂಷೆ ಮಾಡುವ ವೈದ್ಯರು ಹಾಗೂ ನರ್ಸ್ ಗಳಿಗೆ ಈ ಪುಸ್ತಕ ಒಂದು ಮಹಾನ್ ಗ್ರಂಥ ಆಗಿದೆ. ಎಂದು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಲೋಕಸಭಾ ಸದಸ್ಯರು ಪ್ರಸಿದ್ಧ ಹೃದ್ರೋಗ ತಜ್ಞ ಡಾ. ಸಿ.ಎನ್.ಮಂಜುನಾಥ್ ಹೇಳಿದ್ದಾರೆ.
#ShankraCancerHospital ಶಂಕರ ಕ್ಯಾನ್ಸರ್ ಆಸ್ಪತ್ರೆಯಲ್ಲಿ ನಡೆದ ಡಾ. ಆತ್ಮ ಪ್ರಸನ್ನ ಸಂಪಾದಿತ ಕೃತಿ ಪ್ಯಾಲಿಟಿವ್ ಕೇರ್ ಇನ್ ಇಂಡಿಯಾ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.
Also Read: ಜೆಎನ್ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಏ.6ರಿಂದ ಐದು ದಿನ ಎಐಸಿಟಿಇ ಬೂಟ್ ಕ್ಯಾಂಪ್
ಭಾರತದಲ್ಲಿ ಇಂದಿಗೂ ಪ್ಯಾಲಿಟಿವ್ ಕೇರ್ ಒಂದು ಸರಿಯಾದ ರೀತಿಯಲ್ಲಿ ವಿನ್ಯಾಸ ಆಗಿಲ್ಲ. ಇಂತಹ ಸಂದರ್ಭದಲ್ಲಿ ಈ ಅಪರೂಪದ ಕೃತಿ ಬಿಡುಗಡೆ ಆಗುತ್ತಿರುವುದು ನನಗೆ ಬಹಳ ಸಂತೋಷ ತಂದಿದೆ ಎಂದು ಹೇಳಿದರು. ಕೆಲವು ಬಗೆಯ #Cancer ಕ್ಯಾನ್ಸರ್ ಗಳು ಸಂಪೂರ್ಣ ವಾಸಿ ಆಗುವುದಿಲ್ಲ. ಆಗ ಅಂತಹವರ ಬದುಕುವ ಗುಣಮಟ್ಟವನ್ನು ನಾವು ಹೆಚ್ಚಿಸಬೇಕು. ಈ ಪುಸ್ತಕದಲ್ಲಿ ನೂರೊಂದು ಅಧ್ಯಾಯ ಇದೆ ಇದರಿಂದ ಕ್ಯಾನ್ಸರ್ ಚಿಕಿತ್ಸೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳಿಗೆ ಅನುಕೂಲ ಆಗಲಿದೆ. ಕ್ಯಾನ್ಸರ್ ಕಡೇ ಹಂತದಲ್ಲಿ ಇರುವವರನ್ನು ನಾವು ಹೇಗೆ ನೋಡಿಕೊಳ್ಳಬೇಕು, ಅವರ ಆತ್ಮವಿಶ್ವಾಸ ಹೇಗೆ ಹೆಚ್ಚಿಸಬೇಕು ಎಂದು ಈ ಪುಸ್ತಕದಲ್ಲಿ ಸಂಕ್ಷಿಪ್ತವಾಗಿ ಹೇಳಲಾಗಿದೆ ಎಂದು ಪುಸ್ತಕ ಕುರಿತು ವಿವರಿಸಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ಆತ್ಮ ಪ್ರಸನ್ನ ಅವರ ಪತ್ನಿ ಡಾ. ಮಿತಾ ಪ್ರಸನ್ನ ಅವರು ಆತ್ಮ ಪ್ರಸನ್ನ ಅವರ ಜೀವನ ಪರಿಚಯಿಸುವ ಜೊತೆ ಈ ಪುಸ್ತಕದ ಆಳ ಅಗಲವನ್ನು ವಿವರಿಸಿದರು.
Also Read: ಕುಡಿಯುವ ನೀರಿನ ಪಂಪ್ ಹೌಸ್‌ಗೆ ಶಾಸಕ ಚನ್ನಬಸಪ್ಪ ಭೇಟಿ: ನೀರು ಸರಬರಾಜು ತಾಂತ್ರಿಕ ಅಡಚಣೆ ಸರಿಪಡಿಸಲು ಸೂಚನ
ಪ್ಮಾಲಿಟಿವ್ ಕೇರ್ ಕುರಿತು ಈ ಪುಸ್ತಕದಲ್ಲಿ ಭಾರತದ ಶ್ರೇಷ್ಠ ವೈದ್ಯರುಗಳು ವಿವರಿಸಿರುವ ಅನೇಕ ಅಂಶಗಳು ಇವೆ ಎಂದು ಹೇಳಿದ ಶಂಕರ ಕ್ಯಾನ್ಸರ್ ಆಸ್ಪತ್ರೆ ಮುಖ್ಯಸ್ಥ ಡಾ.ಶ್ರೀನಾಥ್ ಇಂತಹಾ ಶ್ರೇಷ್ಠ ಕೃತಿ ಪ್ರಕಟಿಸುವುದು ನಮಗೆ ಹೆಮ್ಮೆ ಇದೆ ಎಂದು ಅವರು ಹೇಳಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















