ಕಲ್ಪ ಮೀಡಿಯಾ ಹೌಸ್
ಶಿಕಾರಿಪುರ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ತಾಲೂಕು ಬಿಜೆಪಿ ವತಿಯಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಹಣ್ಣು, ಬ್ರೆಡ್ ವಿತರಣೆ ಮಾಡಲಾಯಿತು.


ತಾಲೂಕು ಬಿಜೆಪಿ ಅಧ್ಯಕ್ಷ ವಿರೇಂದ್ರ ಪಾಟೀಲ್ ಮಾತನಾಡಿ, ದೇಶದೆಲ್ಲೆಡೆ ಕೋವಿಡ್ ಲಸಿಕೆ ಅಭಿಯಾನ ನಡೆಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನ ಆಚರಿಸಲಾಯಿತು. ಅಂತಹ ರಾಜಕಾರಣಿ ಸಿಗುವುದು ವಿರಳ. ದೇಶದಲ್ಲಿ ಯಾವುದೇ ಭ್ರಷ್ಟಾಚಾರ ಆರೋಪ ಕೇಳಿಬರುತ್ತಿಲ್ಲ. ಅದಕ್ಕೆ ಅವಕಾಶ ಇಲ್ಲದಂತೆ ಆಡಳಿತ ನಡೆಯುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.


ರೈತ ಫಲಾನುಭವಿಗಳಿಗೆ ಯೋಜನೆಯ ಸಂಪೂರ್ಣ ಹಣ ಅವರ ಖಾತೆಗೆ ತಲುಪುತ್ತಿದೆ. ಯೋಜನೆ ದುರುಪಯೋಗ ಮಾಡಿಕೊಳ್ಳಲು ಎಲ್ಲಿಯೂ ಅವಕಾಶ ಇಲ್ಲದಂತೆ ಯೋಜನೆ ರೂಪಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಜನತೆಗೆ ಇನ್ನಷ್ಟು ಅನುಕೂಲ ಆಗುವ ದಿನ ಬರುತ್ತದೆ ಎನ್ನುವುದಕ್ಕೆ ಈ ಎಲ್ಲವೂ ಆಶಾದಾಯಕ ಬೆಳವಣಿಗೆ. ಭ್ರಷ್ಟಾಚಾರದಲ್ಲೆ ವಿಶ್ವಖ್ಯಾತಿ ಪಡೆದವರು ಮೋದಿ ವಿರುದ್ಧ ಮಾತನಾಡುವ ಕುರಿತು ಜನತೆಯೇ ತೀರ್ಮಾನಿಸಬೇಕು ಎಂದರು.


ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ರೇಣುಕಸ್ವಾಮಿ, ಮೆಸ್ಕಾಂ ನಿರ್ದೇಶಕ ರುದ್ರೇಶ್, ಕಾರ್ಯಕರ್ತರಾದ ಸತೀಶ್, ಗಿರೀಶ್ ಧಾರವಾಡ, ಯುವಮೋರ್ಚಾ ಅಧ್ಯಕ್ಷ ಬೆಣ್ಣೆ ಪ್ರವೀಣ್, ಶ್ರೀನಿವಾಸ್, ವೈದ್ಯ ಶಿವಾನಂದ ಮತ್ತಿತರರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















