ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಅನುಮತಿ ಇಲ್ಲದೇ ಶಿಕಾರಿಪುರ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿರುವ ಮರಗಳನ್ನು ಕಡಿದಿರುವ ಹಿನ್ನೆಲೆಯಲ್ಲಿ ಇಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ #B Y Vijayendra ತೆರಳಿ ಪರಿಶೀಲನೆ ನಡೆಸಿದರು.
ಕಾಲೇಜು ಪ್ರಾಂಶುಪಾಲರು ಶಾಸಕರ ಮತ್ತು ಸಂಬಂಧಪಟ್ಟ ಇಲಾಖಾಧಿಕಾರಿಗಳ ಅನುಮತಿಯಿಲ್ಲದೇ, ಕೆಲವು ಮರಗಳನ್ನು ಕಡಿಯಲಾಗಿದ್ದು ಈ ಕುರಿತು ಪ್ರಾಂಶುಪಾಲರನ್ನು ವಿಚಾರಣೆ ನಡೆಸಿದರು. ಅಲ್ಲದೇ, ಮರಗಳ ಕಡಿತದಿಂದಾಗಿ ನಷ್ಟವುಂಟಾಗಿದ್ದು, ಎಚ್ಚರಿಕೆ ನೀಡಿ, ಕೂಡಲೇ ಪರ್ಯಾಯ ಕ್ರಮ ತೆಗೆದುಕೊಳ್ಳುವಂತೆ ಸೂಚಿಸಿದರು. ಜೊತೆಗೆ ಈ ಘಟನೆ ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಲು ಸೂಚಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













Discussion about this post