ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸ್ವಾತಂತ್ರ್ಯ ಇತಿಹಾಸದಲ್ಲಿ ಕಿತ್ತೂರು ಸಂಸ್ಥಾನದ ಹೆಸರು ಅಜರಾಮರವಾಗಿ ಉಳಿದಿದೆ. ಬ್ರಿಟಿಷರ ವಿರುದ್ಧ ಯುದ್ಧ ಮಾಡಿದ ವೀರ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ. 1824ರಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿ ಟ್ಯಾಕರೇ ಸೈನ್ಯವನ್ನು ಸೋಲಿಸಿದ್ದಾರೆ. ಈ ಗೆಲುವಿನ ಸಂಕೇತವಾಗಿ ಪ್ರತಿವರ್ಷ ಅಕ್ಟೋಬರ್ 23 ರಂದು ಕಿತ್ತೂರು ಉತ್ಸವ ಆಚರಿಸಲಾಗುತ್ತದೆ ಎಂದು ಸಂಸದ ಬಿ. ವೈ. ರಾಘವೇಂದ್ರ ತಿಳಿಸಿದರು.
ಶಿಕಾರಿಪುರ ತಾಲೂಕು ಆಡಳಿತ, ತಾಲೂಕು ಪಂಚಾಯತ್, ಪುರಸಭೆ, ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ ಇವರ ಸಂಯುಕ್ತ ಆಶ್ರಯದಲ್ಲಿ ವೀರ ರಾಣಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿಯನ್ನು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ದೀಪ ಬೆಳಗುವ ಮೂಲಕ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ದತ್ತು ಸ್ವೀಕಾರ ವಿರೋಧಿಸುತ್ತಿದ್ದ ಬ್ರಿಟಿಷರ ಆದೇಶಕ್ಕೆ ಬೆಲೆ ಇಲ್ಲ. ನಮ್ಮದೇ ನಾಡು ನಮಗೆ ನಾವೇ ಸಾಮ್ರಾಟರು ಎಂದು ಸಾಮ್ರಾಜ್ಯದ ಉಳಿವಿಗಾಗಿ ಬ್ರಿಟಿಷರ ವಿರುದ್ಧ ಹೋರಾಡಿದವರು ರಾಣಿ ಚೆನ್ನಮ್ಮ. ವೀರ ರಾಣಿಯ ಸ್ವತಂತ್ರ ಪ್ರೇಮ ಕರ್ತವ್ಯ ನಿಷ್ಠೆ ಸಹ ಸಮಯ ಜೀವನ ಎಲ್ಲಾ ಕಾಲಕ್ಕೂ ಆದರ್ಶವಾಗಿದೆ ವೀರರಾಣಿ ಚೆನ್ನಮ್ಮ ಎಂದಿಗೂ ಅಮರರಾಗಿಯೇ ಉಳಿಯುತ್ತಾರೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post