ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ಸ್ವಾಮಿ ವಿವೇಕಾನಂದರ ವಿಚಾರಧಾರೆಗಳು ಸರ್ವ ಕಾಲಕ್ಕೂ ಅನ್ವಯವಾಗುತ್ತವೆ ಎಂದು ಕುಮದ್ವತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಡಾ.ಕೆ.ವಿ. ವೀರೇಂದ್ರ ಅಭಿಪ್ರಾಯಪಟ್ಟರು.
ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ವಿವೇಕಾನಂದರ ಜಯಂತಿ #Vivekananda Jayanthi ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರ ವಿಚಾರಗಳು ಸರ್ವಕಾಲಕ್ಕೂ ಅನ್ವಯವಾಗುತ್ತದೆ. ವಿವೇಕಾನಂದರು ನಾಡು ಕಂಡ ದಾರ್ಶನಿಕ , ಸಂತ, ವಿಚಾರವಾದಿ, ವಿಶ್ವವೇ ಮೆಚ್ಚಿದ ವಿಶ್ವ ಗುರು, ಅವರು ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಚಿಂತನೆಗಳನ್ನು ಹೇಳಿದ್ದಾರೆ ಎಂದು ತಿಳಿಸಿದರು.
ಶಿಕ್ಷಣ, ಧರ್ಮ, ಸಮಾಜ, ಮಹಿಳಾ ಸ್ವಾತಂತ್ರ, ಯುವಜನತೆ, ಭಾರತೀಯತೆ ಹೀಗೆ ಹತ್ತು ಹಲವು ಕ್ಷೇತ್ರಗಳ ಕುರಿತು ಮಾತನಾಡಿದ ತತ್ವಜ್ಞಾನಿ ಇಂತಹ ಶ್ರೇಷ್ಠರ ಜನ್ಮದಿನಾಚರಣೆಯನ್ನು ಭಾರತದಲ್ಲಿ ರಾಷ್ಟ್ರೀಯ ಯುವ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಇವರ ಚಿಂತನೆಗಳು ಇಂದಿನ ಯುವಕರಿಗೆ ಮಾರ್ಗದರ್ಶಕ ಎಂದರು.
ಶಿವರಾಜ್ ಸ್ವಾಗತಿಸಿ, ಯೋಗರಾಜ್ ವಂದಿಸಿದರು. ದೇವರಾಜ್ ನಿರೂಪಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















