ಶಿವಮೊಗ್ಗ: ನಗರದಲ್ಲಿ ಸಹ್ಯಾದ್ರಿ ಉತ್ಸವ ಮುಕ್ತಾಯಗೊಂಡ ಬೆನ್ನಲ್ಲೆ, ವೈನ್ ಪ್ರಿಯರಿಗಾಗಿ ಮೂರು ದಿನಗಳ ದ್ರಾಕ್ಷಾರಸ ಉತ್ಸವವನ್ನು ಏರ್ಪಡಿಸಲಾಗಿತ್ತು.
ನಗರದ ಹಳೇಜೈಲು ಆವರಣದಲ್ಲಿ ಫೆ.1 ರಿಂದ ಮೂರರವರೆಗೆ ಏರ್ಪಾಡು ಮಾಡಿದ್ದು, ವೈನ್ ಪ್ರಿಯರಿಗೆ ವಿವಿಧ ಬಗೆಯ ಉತ್ಪಾದನೆ ಸವಿಯಲು ಅವಕಾಶವಿತ್ತು.
ಉತ್ಸವದಲ್ಲಿ ಸುಮಾರು 150ಕ್ಕೂ ಹೆಚ್ಚು ವಿವಿಧ ಬ್ರಾಂಡ್’ನ ಕಂಪನಿಗಳ ವೈನ್ ಪ್ರದರ್ಶನ ಹಾಗೂ ಮಾರಾಟದಲ್ಲಿ ಸುಮಾರು 12 ರಿಂದ 13 ವೈನ್ ಕಂಪೆನಿಗಳು ಭಾಗವಹಿಸಿದ್ದವು.
ಪ್ರಮುಖವಾಗಿ ರೆಡ್ ವೈನ್, ವೈಟ್ ವೈನ್, ಡೆಸರ್ಟ್ ವೈನ್’ಗಳ ಪ್ರದರ್ಶನ ಹಾಗೂ ಮಾರಾಟವನ್ನು ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ನಡೆಯಿತು.
ಈ ವೇಳೆ ಮಾತನಾಡಿದ ಕರ್ನಾಟಕ ದ್ರಾಕ್ಷಾರಸ ಮಂಡಳಿ ವ್ಯವಸ್ಥಾಪಕ ಟಿ. ಸೋಮು, ಶಿವಮೊಗ್ಗದಲ್ಲಿ ಆಯೋಜಿಸಿದ್ದ ಅಂತಾರಾಷ್ಟಿಯ ದ್ರಾಕ್ಷಾ ರಸ ಉತ್ಸವಕ್ಕೆ ಜನರೂ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ರಾಜ್ಯದಲ್ಲಿ ದ್ರಾಕ್ಷಾ ರಸಕ್ಕೆ ದಿನೇ ದಿನೆ ಬೇಡಿಕೆಯೂ ಸಹ ಹೆಚ್ಚಾಗುತ್ತಿದ್ದು, ದ್ರಾಕ್ಷಿ ಬೆಳೆಗಾರರಿಗೂ ಕೂಡ ಇದು ಉತ್ತಮ ಭವಿಷ್ಯ ಕಲ್ಪಿಸಲಿದೆ ಎಂದರು.
ದ್ರಾಕ್ಷಾ ರಸ ಉತ್ಸವದ ಪ್ರದರ್ಶನ ಹಾಗೂ ಮಾರಾಟದಲ್ಲಿ ಭಾಗಿಯಾಗಿ ದ್ರಾಕ್ಷಾ ರಸದ ರುಚಿಯನ್ನು ಆಸ್ವಾದಿಸಿ ನಂತರ ಖರೀದಿ ಮಾಡಿ ಉತ್ಸವಕ್ಕೆ ಅದರ ಪ್ರಿಯರು ಮೆರಗು ನೀಡಿದರು.
ವರದಿ: ಡಾ. ಸುಧೀಂದ್ರ
Discussion about this post