ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಅನನ್ಯ ಸ್ಪಿರಿಚ್ಯುಯಲ್ ಹೀಲಿಂಗ್ ಸೆಂಟರ್’ನಿಂದ ನಗರದ ರೈಲು ನಿಲ್ದಾಣ ಸಮೀಪ ಇರುವ ರೈಸ್ ಬೌಲ್ ಹೋಟೆಲ್ ಸಭಾಂಗಣದಲ್ಲಿ ಡಿ.29ರ ಭಾನುವಾರ ‘ಸುಪ್ತ ಮನಸ್ಸಿನ ಅತೀಂದ್ರಿಯ ಶಕ್ತಿಗಳು’ – ಮತ್ತು ಸಮ್ಮೋಹಿನಿ ರಹಸ್ಯಗಳು- ಒಂದು ದಿನದ ವಿಶೇಷ ಕಾರ್ಯಾಗಾರ ಆಯೋಜನೆಗೊಂಡಿದೆ.
ಬೆಳಗ್ಗೆ 8ರಿಂದ ರಾತ್ರಿ 8 ರ ವರೆಗೆ ಕಾರ್ಯಾಗಾರ ನಡೆಯಲಿದೆ. ವೇಣುಗೋಪಾಲ್ ಗುರೂಜಿ ಶಿಬಿರ ನಡೆಸಿಕೊಡಲಿದ್ದಾರೆ. ಆಸಕ್ತರು ಮೊದಲೇ ಹೆಸರು ನೋಂದಾಯಿಸುವುದು ಕಡ್ಡಾಯ.
13 ವರ್ಷ ಮೇಲಿನ ಎಲ್ಲರೂ ಭಾಗವಹಿಸಬಹುದು. ವಿವರಗಳು ಮತ್ತು ನೋಂದಣಿಗೆ ಸೌಮ್ಯ 97423 11296 ಸಂಪರ್ಕಿಸಬಹುದು.
ದೀರ್ಘ ಕಾಲದಿಂದ ವಾಸಿಯಾಗದ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳಿಂದ ಬಳಲುತ್ತಿರುವವರು, ಒತ್ತಡ, ಖಿನ್ನತೆ, ಆತ್ಮಹತ್ಯೆ ಯೋಚನೆ, ಆರ್ಥಿಕ ಹಿನ್ನಡೆ, ವ್ಯಾಪಾರ-ವ್ಯವಹಾರದಲ್ಲಿ ಹಿನ್ನಡೆ, ಭಯ, ಅತಿ ಕೋಪ, ವಿದ್ಯಾಭ್ಯಾಸದಲ್ಲಿ ಹಿನ್ನಡೆ ಸೇರಿದಂತೆ ವಿವಿಧ ರೀತಿಯ ಸಮಸ್ಯೆಯಲ್ಲಿ ಬಳಲುತ್ತಿರುವವರು ಅದರಿಂದ ಪರಿಹಾರ ಹೊಂದಲು ಈ ಶಿಬಿರ ಸಹಕಾರಿಯಾಗಿದೆ.
ಪ್ರಮುಖವಾಗಿ, ಒಂಟಿತನ, ನಿರಾಸಕ್ತಿ ಹಾಗೂ ಅತಿದುಃಖದಿಂದ ನೊಂದಿರುವವರು ಅದರಿಂದ ಹೊರಕ್ಕೆ ಬಂದು ನೆಮ್ಮದಿ, ಸಂತೋಷ ಹಾಗೂ ಆತ್ಮಸ್ಥೈರ್ಯದಿಂದ ಜೀವನವನ್ನು ಮುನ್ನಡೆಸುವಂತೆ ಬದಲಾವಣೆ ಕಂಡುಕೊಳ್ಳಲು ಶಿಬಿರದಲ್ಲಿ ವೈಜ್ಞಾನಿಕ ತಳಹದಿಯಲ್ಲಿ ಪ್ರಯೋಗಾತ್ಮಕವಾಗಿ ಶಾಶ್ವತ ಪರಿಹಾರ ಪಡೆಯಬಹುದಾಗಿದೆ.
ಅಲ್ಲದೇ, ಶಿಬಿರದಲ್ಲಿ ಪ್ರಾಚೀನ ಸಮ್ಮೋಹಿನಿ ವಿದ್ಯೆಯ ಪರಿಚಯವನ್ನೂ ಸಹ ಮಾಡಿಕೊಡಲಾಗುತ್ತದೆ. ಅದಲ್ಲದೇ ಜೀವನದಲ್ಲಿ ಇನ್ನೂ ಹೆಚ್ಚಿನ ಶಾಂತಿ, ನೆಮ್ಮದಿ, ಸಾಮರಸ್ಯ, ಉತ್ತಮ ಆರೋಗ್ಯ ಹಾಗೂ ಅಧ್ಯಾತ್ಮಿಕ ಸಾಧನೆಯ ಕನಸು ಹೊತ್ತಿರುವವರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಕಾರ್ಯಾಗಾರದ ಪ್ರಯೋಜನ ಸಾಧ್ಯತೆಗಳು:
- ಉತ್ತಮ ಆರೋಗ್ಯ, ಕಾರ್ಯಕ್ಷಮತೆ, ಏಕಾಗ್ರತೆ ಮತ್ತು ಧನಾತ್ಮಕ ಚಿಂತನೆ ಹೆಚ್ಚಿಸಿಕೊಳ್ಳಬಹುದು
- ವೈಯಕ್ತಿಕ, ಕೌಟುಂಬಿಕ, ವೃತ್ತಿ, ಆರ್ಥಿಕ ಮತ್ತು ಸಾಮಾಜಿಕ ಜೀವನಗಳಲ್ಲಿ ಸಾಮರಸ್ಯ ಸಾಧಿಸಿ, ಬದುಕನ್ನು ಸುಂದರವಾಗಿಸಿ ಕೊಳ್ಳಬಹುದು
- ದೈನಂದಿನ ಉದ್ವಿಗ್ನತೆ ಮತ್ತು ಖಿನ್ನತೆಯಿಂದ ದೂರವಿರಲು ಸಹಕಾರಿ
- ಧ್ಯಾನದ ಕಿರು ಪರಿಚಯ, ಸಂತೋಷದಾಯಕ ಮತ್ತು ನೆಮ್ಮದಿಯ ಜೀವನದತ್ತ ಒಂದು ಹೆಜ್ಜೆ
- ಸ್ವ-ಸಮ್ಮೋಹಿನಿ ಕ್ರಮವನ್ನು ತಿಳಿಯಲು ಸದಾವಕಾಶ
- ಉತ್ತಮ ಆಲೋಚನೆ, ಆಯ್ಕೆ, ಸ್ಪಷ್ಟ ನಿರ್ಧಾರ, ಸ್ಪಷ್ಟ ಗುರಿ, ನಿಖರತೆಗಳಿಂದ ಸುಖೀ ಜೀವನವನ್ನು ನಡೆಸಬಹುದು
- ನಮ್ಮ ಬದುಕಿನಲ್ಲಿ ಬರುವ ಯಾವುದೇ ಸಮಸ್ಯೆ, ಒತ್ತಡಗಳನ್ನು ಸುಲಭವಾಗಿ ನಿಭಾಯಿಸಬಹುದು
ನಮ್ಮ ಸುತ್ತ-ಮುತ್ತ ಇರುವ ವ್ಯಕ್ತಿಗಳಿಂದ ನಮಗೆ ತೊಂದರೆಗಳಾದಾಗ ಅಥವಾ ಹಾನಿಯಾದಾಗ ಸಿಟ್ಟನ್ನು, ಕೋಪವನ್ನು ಅಥವಾ ದುಃಖವನ್ನು ವ್ಯಕ್ತಪಡಿಸಲಾಗದೇ, ಹೊರಹಾಕಲಾಗದೇ ಅಥವಾ ಕ್ಷಮಿಸದೇ ಮನಸ್ಸಿನಲ್ಲಿಯೇ ಇಟ್ಟುಕೊಂಡಿರುತ್ತೇವೆ. ಅಳುವಾಗ ಅಳದೇ, ನಗುವಾಗ ನಗದೇ ಹಾಗೇ ಮನಸ್ಸಿನ ಆಳದಲ್ಲಿರುವ ಈ ತರಹದ ಭಾವನೆಗಳು ಕೆಲವೊಮ್ಮೆ ಬೇರೆ ಬೇರೆ ತರಹದ ಮನೋದೈಹಿಕ ವ್ಯಾಧಿಗಳ (ಮೈಗ್ರೆನ್, ಕೀಲು ನೋವುಗಳು, ಬಿಪಿ, ಶುಗರ್, ಟ್ಯೂಮರ್, ಕ್ಯಾನ್ಸರ್ ಇತ್ಯಾದಿ) ರೂಪದಲ್ಲಿ ಕಾಣಿಸುತ್ತವೆ. ಈ ತರಹದ ಮನಸ್ಸಿನಾಳದಲ್ಲಿ ಹುದುಗಿರುವ ಭಾವನೆಗಳನ್ನು ಹೊರಹಾಕಲು ಈ ಧ್ಯಾನ ಚಿಕಿತ್ಸಾ ಕಾರ್ಯಾಗಾರ ಅನುಕೂಲ ಮಾಡಲಿದೆ.
ಈ ಶಿಬಿರವು ಸಂಪೂರ್ಣವಾಗಿ ವೈಜ್ಞಾನಿಕ, ಪ್ರಾಯೋಗಿಕ ಹಾಗೂ ಪ್ರಾತ್ಯಕ್ಷತೆಗಳಿಂದ ಕೂಡಿದ್ದು, ನಮ್ಮ ಹೃನ್ಮನಾತ್ಮಕ ಶರೀರಗಳಲ್ಲಿಯ ಅಡೆತಡೆಗಳನ್ನು ನಿವಾರಿಸುವ ಮುಖ್ಯಧ್ಯೇಯವನ್ನು ಹೊಂದಿದೆ.
Get in Touch With Us info@kalpa.news Whatsapp: 9481252093
Discussion about this post