ಶಿವಮೊಗ್ಗ: ಜಿಲ್ಲೆಯ ಭದ್ರಾವತಿ ತಾಲೂಕಿನ ಅಂತರಗಂಗೆ, ಹೊಸನಗರದ ಅಮೃತ, ಸಾಗರದ ಆನಂದಪುರ, ಶಿಕಾರಿಪುರದ ಶಿರಾಳಕೊಪ್ಪ, ಹಿತ್ತಲ, ಶಿವಮೊಗ್ಗದ ಶೆಟ್ಟಿಹಳ್ಳಿ, ಸರ್ಕಾರಿ ಪದವಿ ಪೂರ್ವ ಕಾಲೇಜು ಬಿಹೆಚ್ ರಸ್ತೆ ಶಿವಮೊಗ್ಗ, ಗಾಜನೂರು, ಸೊರಬದ ಆನವಟ್ಟಿ, ತೀರ್ಥಹಳ್ಳಿಯ ಕೋಣಂದೂರು ಈ ಸ್ಥಳಗಳಲ್ಲಿ ಪೂರ್ವ ಪ್ರಾಥಮಿಕ ಶಾಲೆಗಳನ್ನು ಆರಂಭಿಸಲಾಗಿದ್ದು ಹತ್ತು ತಿಂಗಳ ಅವಧಿಗೆ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ.
ಪದವಿ ಪೂರ್ವ ಶಿಕ್ಷಣದಲ್ಲಿ ಶೇ.50ಕ್ಕಿಂತ ಅಧಿಕ ಅಂಕ ಪಡೆದ ಹಾಗೂ ಎನ್’ಸಿಟಿಇನಿಂದ ಮಾನ್ಯತೆ ಪಡೆದ ಎರಡು ವರ್ಷ ಅಥವಾ ಹೆಚ್ಚಿನ ಡಿಪ್ಲೊಮಾ ಇನ್ ನರ್ಸರಿ ಟೀಚರ್, ಪ್ರಿ-ಸ್ಕೂಲ್, ಅರ್ಲಿ ಚೈಲ್ಡ್ ಹುಡ್ ಎಜುಕೇಷನ್ ಪ್ರೋಗ್ರಾಮ್ ಅಥವಾ ಬಿಎಡ್ ನರ್ಸರಿ ವಿದ್ಯಾರ್ಹತೆ ಹೊಂದಿರುವ 45 ವರ್ಷ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಮಾಸಿಕ ವೇತನ 7500 ರೂ.ಗಳನ್ನು ನಿಗದಿ ಪಡಿಸಲಾಗಿದೆ.
ಎಸ್‌ಎಸ್‌ಎಲ್‌ಸಿ ಉತ್ತೀರ್ಣ ಹೊಂದಿರುವ ಸ್ಥಳೀಯ ಮಹಿಳೆಯರೊಬ್ಬರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದ್ದು ಅರ್ಜಿ ಸಲ್ಲಿಸಲು ಕೋರಲಾಗಿದೆ. ಮಾಸಿಕ ವೇತನ 7000 ರೂ.ಗಳನ್ನು ನಿಗದಿಪಡಿಸಲಾಗಿದೆ. ಅರ್ಜಿಯನ್ನು ಆಯಾ ತಾಲೂಕುಗಳ ಕೆಪಿಎಸ್ ಶಾಲೆಗಳ ಮುಖ್ಯ ಶಿಕ್ಷಕರಿಗೆ ಮೇ 27ರೊಳಗಾಗಿ ಸಲ್ಲಿಸುವಂತೆ ಸೂಚಿಸಲಾಗಿದೆ.
















