ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಯಲವಟ್ಟಿ, ಮತ್ತೋಡು ಮತ್ತು ಶಾಂತಿನಗರದ ಸಾರ್ವಜನಿಕ ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ ಮಟ್ಕಾ ಜೂಜಾಟ ಬರೆಯುತ್ತಿದ್ದವರ ಮೇಲೆ ಜಿಲ್ಲಾ ಪೊಲೀಸರು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.
ಶಿವಮೊಗ್ಗ ನಿವಾಸಿಗಳಾದ ರಾಘವೇಂದ್ರ (36), ಸುರೇಶ (42), ಡ್ಯಾನಿಯಲ್ ಆಲಿಯಾಸ್ ಡ್ಯಾನಿ (40) ಬಂಧಿತ ಆರೋಪಿಗಳು. 42,850ರೂ ನಗದು ಹಾಗೂ ಓಸಿಗೆ ಸಂಬಂಧಿಸಿದ ದಾಖಲೆಗಳನ್ನು ಅಮಾನತ್ತುಪಡಿಸಿಕೊಂಡು, ಪ್ರತ್ಯೇಕ ಮೂರು ಪ್ರಕರಣಗಳನ್ನು ದಾಖಲಿಸಿ ಆರೋಪಿತರನ್ನು ದಸ್ತಗಿರಿ ಮಾಡಿ ಕ್ರಮ ಕೈಗೊಂಡಿದೆ ಎಂದು ಪೊಲೀಸ್ ಅಧೀಕ್ಷಕ ಕೆ.ಎಂ. ಶಾಂತರಾಜು ತಿಳಿಸಿದ್ದಾರೆ.
ಪೊಲೀಸ್ ಕಚೆರಿಯ ಕುಮಾರಸ್ವಾಮಿ, ಡಿಸಿಬಿಐ ವಿಭಾಗದ ಸಿಬ್ಬಂದಿಗಳಾದ ಹೆಚ್.ಸಿ ಹಾಲಪ್ಪ, ಸತೀಶ್ ರಾಜ್, ಮಂಜುನಾಥ್, ಪಿ.ಸಿ. ಚಂದ್ರಾನಾಯ್ಕ್, ಸಮೀವುಲ್ಲಾ ಮತ್ತು ವಸಂತ್ ಅವರನ್ನೊಳಗೊಂಡ ತಂಡ ದಾಳಿ ನಡೆಸಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
 
	    	



 Loading ...
 Loading ... 
							



 
                
Discussion about this post