ಕಲ್ಪ ಮೀಡಿಯಾ ಹೌಸ್
ಲಕ್ಕವಳ್ಳಿ: ಉಂಬ್ಳೇಬೈಲ್ ವ್ಯಾಪ್ತಿಯ ಮಾರಿದಿಬ್ಬ ಪ್ರದೇಶದಲ್ಲಿ ಸುಮಾರು 20 ಕಾಡಾನೆಗಳು ಸಂಚಾರ ಮಾಡಿದ್ದು, ಸ್ಥಳೀಯರನ್ನು ಆತಂಕ ಮೂಡಿಸಿದೆ.
2018ರಲ್ಲಿ 5 ಆನೆಗಳು ಇದೆ ರೀತಿ ಬಂದಿದ್ದವು. ಭದ್ರಾ ನದಿ ಬಲ ದಂಡೆಯಲ್ಲಿ ಉಂಬ್ಳೇಬೈಲ್ ಅರಣ್ಯ ವ್ಯಾಪ್ತಿಯಲ್ಲಿ ಸಾಕಷ್ಟು ಅರಣ್ಯ ಇರುವ ಕಾರಣ ಮತ್ತು ಭದ್ರಾ ಹಿನ್ನೀರಿನಲ್ಲಿ ನೀರಿನ ಮಟ್ಟ ಇಳಿಯದ ಕಾರಣ ಪುನಃ ತಮ್ಮ ಹಿಂತಿರುಗಿ ಹೋಗದೇ ಇದೇ ವ್ಯಾಪ್ತಿಯಲ್ಲಿ ಸಂಚರಿಸುತ್ತಿವೆ.ಈಗ 20 ಆನೆಗಳ ದಂಡು ಆಗಾಗ ಕಾಡುತ್ತಿವೆ ಮಾರಿದಿಬ್ಬ, ಬಾಳೆಕೊಪ್ಪ, ಕಣಗಲಸರ, ಕಾಕನಹಸೂಡಿ ಗ್ರಾಮಸ್ತರಲ್ಲಿ ಆತಂಕ ಕೂಡ ಮನೆ ಮಾಡಿವೆ.ಈ ಹಿನ್ನೆಲೆಯಲ್ಲಿ ಕೊಪ್ಪ ಅರಣ್ಯ ವಿಭಾಗ ಮತ್ತು ಉಂಬ್ಳೇಬೈಲ್ ವನ್ಯಜೀವಿ ವಿಭಾಗದ ಅಧಿಕಾರಿಗಳ ನಿದ್ದೆ ಕೆಡಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post