ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲಾ ಸ್ವದೇಶಿ ಜಾಗರಣ ಮಂಚ್ #SvadeshiJagaranaManch ವತಿಯಿಂದ ಮುಂದಿನ ತಿಂಗಳು ಡಿಸೆಂಬರ್ 6 ರಿಂದ 10 ರವರೆಗೆ ನಗರದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಸ್ವದೇಶಿ ಮೇಳ #SvadeshiMela ಆಯೋಜನೆಗೊಂಡಿದ್ದು, ಈಗಾಗಲೇ ಮಳಿಗೆ ಹಾಕಲು ಬುಕ್ಕಿಂಗ್ ಆರಂಭಗೊಂಡಿದೆ.
ಜನರಿಗೆ ಸ್ವದೇಶಿ ವಸ್ತುಗಳ ಪರಿಚಯ ಮಾಡಿಸುವುದರ ಜೊತೆಗೆ ದೇಶೀಯ ಉತ್ಪಾದಕರಿಗೆ ಮಾರುಕಟ್ಟೆ #Market ಒದಗಿಸುವ ದೃಷ್ಟಿಯಿಂದ 250ಕ್ಕೂ ಹೆಚ್ಚು ಮಳಿಗೆಗಳು ಭಾಗವಹಿಸಲಿವೆ.
1 ಲಕ್ಷಕ್ಕೂ ಹೆಚ್ಚು ವಿವಿಧ ವರ್ತಕರು, ಉದ್ಯಮಿಗಳು ಹಾಗೂ ಸಾರ್ವಜನಿಕರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ವಿವಿಧ ರೀತಿಯ ತರಬೇತಿಗಳು, ದೇಶೀಯ ಕ್ರೀಡೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಈ ಮೇಳದಲ್ಲಿ ಕೇಂದ್ರದ ಮಂತ್ರಿಗಳು, ರಾಜ್ಯದ ಪ್ರಮುಖ ಸ್ವಾಮೀಜಿಗಳು ಹಾಗೂ ರಾಜ್ಯದ ಮತ್ತು ಜಿಲ್ಲೆಯ ಪ್ರಮುಖ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ಮೇಳದಲ್ಲಿ ಮಳಿಗೆ ಹಾಕಲು ಆಸಕ್ತರು ಈ ಕೆಳಗಿನ ದೂರವಾಣಿ(ಅರವಿಂದ-9148524854)ಯನ್ನು ಸಂಪರ್ಕಿಸಲು ಕೋರುವಂತೆ ಸ್ವದೇಶಿ ಮೇಳದ ಸಂಯೋಜಕರಾದ ಡಾ ಧನಂಜಯ ಸರ್ಜಿ, ಸಂಚಾಲಕರಾದ ಡಿ.ಎಸ್. ಅರುಣ್ ಹಾಗೂ ಸಂಘಟಕರಾದ ಹರ್ಷ ಬಿ. ಕಾಮತ್ ಅವರು ಕೋರಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















