ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದಲ್ಲಿ ಮೀಟರ್ ಅಳವಡಿಸಿಕೊಳ್ಳದೇ, ಜಿಎಸ್’ಎಂ ನಂಬರ್, ಸೂಕ್ತ ದಾಖಲಾತಿಯಿಲ್ಲದ ಒಟ್ಟು 42 ಆಟೋ #Auto ಚಾಲಕರ ವಿರುದ್ಧ ಪ್ರಕರಣ ದಾಖಲಿಸಿ, ದಂಡ ವಸೂಲಿ ಮಾಡಲಾಗಿದೆ.
ಮೀಟರ್ ಅಳವಡಿಸಿಕೊಳ್ಳದೇ, ಎಸ್’ಎಂಜಿ ನಂಬರ್ #GSMNumber ಪಡೆಯದೇ ಮತ್ತು ಸೂಕ್ತ ದಾಖಲಾತಿಗಳಿಲ್ಲದೇ ಚಾಲನೆ ಮಾಡುತ್ತಿದ್ದ ಒಟ್ಟು 50 ಆಟೋಗಳನ್ನು ವಶಕ್ಕೆ ಪಡೆಯಲಾಗಿದೆ.ದಾಖಲಾತಿಗಳು ಸರಿ ಇದ್ದ ಒಟ್ಟು 08 ಆಟೋಗಳಿಗೆ ಜಿಎಸ್’ಎಂ ನಂಬರ್ ನೀಡಿ, ಸೂಕ್ತ ದಾಖಲಾತಿಗಳು ಇಲ್ಲದ ಒಟ್ಟು 42 ಆಟೋ ಚಾಲಕರು/ಮಾಲೀಕರ ವಿರುದ್ಧ ಐಎಂವಿ ಕಾಯ್ದೆಯಡಿಯಲ್ಲಿ #IMVAct 42 ಪ್ರಕರಣಗಳನ್ನು ದಾಖಲಿಸಿ, ಒಟ್ಟು ರೂ 21,000 ದಂಡ ವಿಧಿಸಲಾಗಿದೆ.
ಆಟೋ ಮೀಟರ್ #Auto_Meter ಅಳವಡಿಸಿಕೊಳ್ಳದೇ ಇದ್ದ ಮತ್ತು ಜಿಎಸ್’ಎಂ ನಂಬರ್ ಪಡೆಯದೇ ಇದ್ದ ಆಟೋ ಚಾಲಕರುಗಳಿಗೆ ಇನ್ನು 01 ವಾರದ ಒಳಗಾಗಿ ಕಡ್ಡಾಯವಾಗಿ ಮೀಟರ್ ಅಳವಡಿಸಿಕೊಳ್ಳುವಂತೆ ಮತ್ತು ಜಿಎಸ್’ಎಂ ನಂಬರ್ #GSMNumber ಅನ್ನು ಪಡೆದು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದ್ದು, ತಪ್ಪಿದ್ದಲ್ಲಿ ಅಂತಹವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದೆಂದು ಎಚ್ಚರಿಕೆ ನೀಡಲಾಗಿದೆ.
ಕಾರ್ಯಚರಣೆಯಲ್ಲಿ ಶಿವಮೊಗ್ಗ ಸಂಚಾರ ವೃತ್ತದ #TrafficCircle ಸಿಪಿಐ ಜಯಶ್ರೀ ಮಾನೆ, ಪಿಎಸ್ ಐ ಶೈಲಜ, ದೊಡ್ಡಮನಿ, ಶಿವಮೊಗ್ಗ ಪಶ್ಚಿಮ ಸಂಚಾರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ತಂಡ ಭಾಗವಹಿಸಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post