ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಭಾರೀ ಮಳೆ #HeavyRain ಇಂದೂ ಸಹ ಮುಂದುವರೆದಿದ್ದು, ಮೇ 22ರವರೆಗೂ ಯೆಲ್ಲೋ ಅಲರ್ಟ್ #YellowAlert ಘೋಷಣೆ ಮಾಡಲಾಗಿದೆ.
ಜಿಲ್ಲೆಯ ಹಲವು ತಾಲೂಕುಗಳಲ್ಲಿ ಮಳೆರಾಯ ಅಬ್ಬರಿಸುತ್ತಿದ್ದು, ಬೇಸಿಗೆಯಿಂದ ಬಳಲಿ ಬೆಂಡಾಗಿದ್ದ ಮಲೆನಾಡಿಗೆ ತಂಪನೆರೆದಿದೆ.
ಇಂದು ರಾತ್ರಿ ಆರೆಂಜ್ ಅಲರ್ಟ್ #OrangeAlert ಘೋಷಣೆ ಮಾಡಲಾಗಿದ್ದು, ಮೇ 22ರವರೆಗೂ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ.
ಇನ್ನು, ಶಿವಮೊಗ್ಗ #Shivamogga ನಗರ ಹಾಗೂ ಭದ್ರಾವತಿ ಸೇರಿದಂತೆ ಹಲವು ತಾಲೂಕುಗಳಲ್ಲಿ ಇಂದು ಭಾರೀ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಲ್ಲಿನ ಮನೆ ಹಾಗೂ ಅಂಗಡಿಗಳಿಗೆ ನೀರು ನುಗ್ಗುವ ಆತಂಕವೂ ಸಹ ಇದೆ.
Also read: ಲೈಂಗಿಕ ದೌರ್ಜನ್ಯ ಕೇಸ್ | ಶಾಸಕ ಎಚ್.ಡಿ. ರೇವಣ್ಣಗೆ ಜಾಮೀನು ಮಂಜೂರು
ಇದರೊಂದಿಗೆ ಸಾಗರ, ತೀರ್ಥಹಳ್ಳಿ, ಹೊಸನಗರ #Hosanagara ಭಾಗದಲ್ಲೂ ಸಹ ಗುಡುಗು ಸಹಿತ ಭಾರೀ ಮಳೆ ಸುರಿಯುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post