ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನೆಹರು ಯುವ ಕೇಂದ್ರ, ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಹಾಗೂ ವಿನೋಬ ನಗರ ನಿವಾಸಿಗಳ ಬಳಗದ ವತಿಯಿಂದ ವಿನೋಬ ನಗರದ ಸರ್ಕಾರಿ ಪ್ರೌಢಶಾಲೆಯಲ್ಲಿ ಗಣರಾಜೋತ್ಸವದ ಅಂಗವಾಗಿ ಕೊರೋನಾ ವಾರಿಯರ್ಸ್‌ಗಳನ್ನು ಗೌರವಿಸಲಾಯಿತು.
ವಿನೋಬ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಾದ ಡಾಕ್ಟರ್ ಶ್ರೀಧರ್, ಮೆಗ್ಗಾನ್ ಆಸ್ಪತ್ರೆ ಶವಾಗಾರದ ಸಿಬ್ಬಂದಿಯಾದ ಮುರುಳಿ, ವಿನೋಬನಗರದ ಆಶಾ ಕಾರ್ಯಕರ್ತೆಯದ ಪಲ್ಲವಿ, ವಿನೋಬ ನಗರದ ಮಹಾನಗರ ಪಾಲಿಕೆ ಸ್ವಚ್ಛತಾ ಸಿಬ್ಬಂದಿಯಾದ ಪವಿತ್ರ ಅವರನ್ನು ಸನ್ಮಾನಿಸಲಾಯಿತು.
ಶಾಲೆಯ ಎಸ್’ಡಿಎಂಸಿ ಅಧ್ಯಕ್ಷರಾದ ಬಾಲು, ಶಾಲೆಯ ಮುಖ್ಯೋಪಧ್ಯಾಯರಾದ ಜಗದೀಶ್, ನಿವಾಸಿಗಳ ಬಳಗದ ಪ್ರಮುಖರಾದ ವಿನೋದ್ ರಾಘವೇಂದ್ರ ಮಲ್ಲೇಶಪ್ಪ ಶ್ರೀಧರ್ ಹಾಗೂ ನೆಹರು ಯುವ ಕೇಂದ್ರದ ಪ್ರಮುಖರಾದ ರಮೇಶ್ ಹಾಗೂ ಶಿವಮೊಗ್ಗ ಸಿಟಿ ಕರಾಟೆ ಅಸೋಸಿಯೇಷನ್ ಪ್ರಮುಖರಾದ ವೀರೇಶಪ್ಪ, ರಮೇಶ್ ವೆಂಕಟೇಶ್, ಶ್ರೇಯಸ್, ಹರ್ಷಿತ್ ಸಾಗರ್ ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















