ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿನೋಬ ನಗರದ ಏಳನೇ ವಾರ್ಡ್ನ ಕಾಶಿಪುರ ಮುಖ್ಯರಸ್ತೆಯ ದಾವಣಗೆರೆ ಕ್ಯಾಂಟೀನ್ ಮುಂಭಾಗದಲ್ಲಿ ಯುಜಿಡಿ ಚೇಂಬರ್ ಶಿಥಿಲಗೊಂಡಿದ್ದು ತತಕ್ಷಣ ತೆರವುಗೊಳಿಸಿ, ಹೊಸ ಯುಜಿಡಿ ನಿರ್ಮಿಸಬೇಕು ಎಂದು ಯುವ ಕಾಂಗ್ರೆಸ್ ಆಗ್ರಹಿಸಿದೆ.
ಯುಜಿಡಿ ನೀರು ಹರಿದು ರಸ್ತೆಯಲ್ಲಿ ಹರಿದಾಡುತ್ತಿದ್ದು ಪೌರ ಕಾರ್ಮಿಕರು ದಿನನಿತ್ಯ ಬಂದು ಟ್ಯಾಂಕ್’ನಲ್ಲಿರುವ ನೀರನ್ನು ಡಂಪ್ ಮಾಡಿಕೊಂಡು ಹೋಗುತ್ತಿದೆ. ಆದರೆ ಇಂತಹ ಸಾಂಕ್ರಾಮಿಕ ರೋಗಗಳ ಸಂದರ್ಭದಲ್ಲಿ ಮತ್ತೊಂದು ಅನಾಹುತ ಸಂಭವಿಸುವ ಮುಂಚಿತವಾಗಿ ಮಹಾನಗರ ಪಾಲಿಕೆ ಎಚ್ಚೆತ್ತುಕೊಂಡು ಶಿಥಿಲಗೊಂಡ ಚೇಂಬರ್ ಟ್ಯಾಂಕ್ ತೆರವು ಮಾಡಿ ಹೊಸ ಚೇಂಬರ್’ಗಳನ್ನು ನಿರ್ಮಿಸಬೇಕೆಂದು ಸ್ಥಳೀಯರು ನಾಗರಿಕರು ಮಹಾನಗರ
ಪಾಲಿಕೆಗೆ ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಕಾಂಗ್ರೆಸ್ ನಗರಾಧ್ಯಕ್ಷ ಎಚ್.ಪಿ. ಗಿರೀಶ್ ಸ್ಥಳೀಯ ಮುಖಂಡರುಗಳಾದ ಸುನೀಲ್ ಕುಮಾರ್ , ಮಂಜುನಾಥ್, ರುದ್ರೇಶ್, ಕುಮಾರ್, ನಾಗರಾಜ್ ಇತರರು ಇದ್ದರು
Get in Touch With Us info@kalpa.news Whatsapp: 9481252093















