ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ನಗರದ ಹಲವು ಬಡಾವಣೆಗಳಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದು, ಎರಡು ದಿನದಲ್ಲಿ ಇಬ್ಬರು ಮಕ್ಕಳಿಗೆ ಕಚ್ಚಿ ಗಾಯಗೊಳಿಸಿರುವ ಘಟನೆ ನಡೆದಿದೆ.
5ನೆಯ ವಾರ್ಡ್ ಪುರಲೆ ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ನಾಯಿಗಳು ಬೀಡುಬಿಟ್ಟಿವೆ. ಮೂರು ವರ್ಷದ ಬಾಲಕಿಯೊಬ್ಬಳಿಗೆ ನಾಯಿಗಳು ಕಚ್ಚಿ ಗಾಯಗೊಳಿಸಿದ್ದು, ಆಕೆಯನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನೊಂದು ಪ್ರಕರಣದಲ್ಲಿ ಇನ್ನೊಂದು ಮಗುವಿಗೆ ನಾಯಿ ಕಚ್ಚಿರುವ ಕುರಿತಾಗಿ ವರದಿಯಾಗಿದೆ.
ಘಟನೆಯಿಂದ ಈ ಭಾಗದ ಪೋಷಕರು ಹಾಗೂ ಪುರಲೆ ಗ್ರಾಮಸ್ಥರು ಆತಂಕದಲ್ಲಿದ್ದು, ಹಿಂದೆ ಬೀದಿ ನಾಯಿಗಳನ್ನು ಸ್ಥಳಾಂತರಿಸುವಂತೆ ಮನವಿ ನೀಡಿದ್ದರೂ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಲೆ ಕೆರೆ ಬಳಿ ನಾಯಿಗಳು ನೂರಾರು ಸಂಖ್ಯೆಯಲ್ಲಿ ಬೀಡು ಬಿಟ್ಟಿವೆ. ಕೆರೆ ಇಲ್ಲಿ ಬಿಸಾಕುವ ಅನುಪಯುಕ್ತ ತ್ಯಾಜ್ಯ ಹಾಗೂ ಕಟ್ಟಡ ಕಾರ್ಮಿಕರು ಬಿಸಾಡುವ ಮಾಂಸಹಾರಿ ಪದಾರ್ಥಗಳು ಕಾರಣ ಎಂದು ಪುರಲೆ ಗ್ರಾಮಸ್ಥರು ಆರೋಪಿಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post