ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಶಿವಮೊಗ್ಗ ರಂಗಾಯಣದ ವತಿಯಿಂದ ಸರ್ವರಿಗೂ ಸಂವಿಧಾನ ಕಾರ್ಯಕ್ರಮದಡಿ ಸಿದ್ಧಪಡಿಸಲಾಗುವ ನಾಟಕದಲ್ಲಿ ಭಾಗವಹಿಸಲು ಇಚ್ಛೆಯುಳ್ಳ ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಶಿವಮೊಗ್ಗ ರಂಗಾಯಣದ ವ್ಯಾಪ್ತಿಗೆ ಒಳಪಡುವ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಕೋಲಾರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ ಮತ್ತು ಶಿವಮೊಗ್ಗ ಜಿಲ್ಲೆಗಳಿಗೆ ಸೇರಿದ ಕಲಾವಿದರಿಗೆ ಆದ್ಯತೆ ನೀಡಲಾಗುವುದು.
ಸಂವಿಧಾನದ ಆಶಯಗಳನ್ನು ನಾಟಕದ ಮೂಲಕ ಪರಿಚಯಿಸುವ ನಿಟ್ಟಿನಲ್ಲಿ ಸ್ಕ್ರಿಪ್ಟ್ ಸಲ್ಲಿಸಲು, ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿದ ನಾಟಕ ರಚನಾ ಲೇಖಕರಿಂದ ಹಾಗೂ ನಾಟಕದ ನಿರ್ದೇಶನಕ್ಕಾಗಿ ಅರ್ಹ ನಿರ್ದೇಶಕರು ಅರ್ಜಿ ಸಲ್ಲಿಸಬಹುದು.
ಸ್ವವಿವರಗಳೊಂದಿಗೆ ಅರ್ಜಿಯನ್ನು ಮಾರ್ಚ್ 2ರ ಒಳಗಾಗಿ ಆಡಳಿತಾಧಿಕಾರಿಗಳು, ರಂಗಾಯಣ, ಸುವರ್ಣ ಸಾಂಸ್ಕೃತಿಕ ಭವನ, ಶಿವಮೊಗ್ಗ ವಿಳಾಸಕ್ಕೆ ಅಂಚೆ ಮೂಲಕ, ಖುದ್ದಾಗಿ ಅಥವಾ ಇಮೇಲ್ admn.rangayanashivamogga@gmail.comಗೆ ಸಲ್ಲಿಸಬಹುದು.
ವಿವರಗಳಿಗೆ ದೂರವಾಣಿ ಸಂಖ್ಯೆ 08182-256353ಕ್ಕೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post