ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಲೆನಾಡಿನ ಹೆಬ್ಬಾಗಿಲು ಶಿವಮೊಗ್ಗದಲ್ಲಿ ಒಂದೇ ಸೂರಿನಡಿಯಲ್ಲಿ ಗೃಹ ನಿರ್ಮಾಣ ವಸ್ತುಗಳ ವಿಶಾಲ ಮಳಿಗೆ ಆರಂಭವಾಗಿದೆ.
ಸತ್ಯಂ ಫೋರ್ ವಿಂಗ್ಸ್’ನ 82ನೆಯ ಮಳಿಗೆ ಸಾಗರ ರಸ್ತೆಯ ಎಂಎಡಿಬಿ ಎದುರಿನಲ್ಲಿ ಆರಂಭವಾಗಿದ್ದು, ದೇಶ ವಿದೇಶಗಳ ಪ್ರಖ್ಯಾತ ಕಂಪೆನಿಗಳ ಟೈಲ್ಸ್, ಮಾರ್ಬಲ್, ಪೈಂಟ್ಸ್, ಒಳಾಂಗಣ ವಿನ್ಯಾಸ, ವಿವಿಧ ಶ್ರೇಣಿಗಳ ಹಾಗೂ ಅತ್ಯಾಕರ್ಷಕ ವಿನ್ಯಾಸದ ವಿದ್ಯುತ್ ದೀಪ, ಫ್ಯಾನ್ಸ್, ಏರ್ ಕಂಡೀಷನ್, ವಿವಿಧ ನಮೂನೆಯ ಡೋರ್ ಹ್ಯಾಂಡಲ್, ಅಡುಗೆ ಮನೆ ಸೇರಿದಂತೆ ಗೃಹ ನಿರ್ಮಾಣ ಹಾಗೂ ಗೃಹೋಪಯೋಗಿ ವಸ್ತುಗಳ ಒಂದೇ ಮಳಿಗೆಯಲ್ಲಿ ದೊರೆಯಲಿದೆ.
ಈ ಕುರಿತಂತೆ ಮಾತನಾಡಿದ ಫ್ಯಾನ್‌ಜಾರ್ಟ್‌ನ ಕಾರ್ಯನಿರ್ವಾಹಕ ನಿರ್ದೇಶಕ ತರುಣ್ ಲಾಲಾ, ಶಿವಮೊಗ್ಗ ದೇಶದಲ್ಲಿ ವೇಗವಾಗಿ ಬೆಳವಣಿಗೆಯಾಗುತ್ತಿರುವ ನಗರ. ನಾವು ದೇಶದಾದ್ಯಂತ 2 ಹಾಗೂ 3ನೆಯ ಶ್ರೇಣಿಯ ನಗರಗಳನ್ನು ಆಯ್ಕೆ ಮಾಡುತ್ತೇವೆ. ನಮ್ಮ ಸುತ್ತಮುತ್ತಲಿನ ಕೆಲವು ಶ್ರೇಣಿ 2 ನಗರಗಳಲ್ಲಿರುವ ಸಾಮರ್ಥ್ಯವನ್ನು ನಾವು ತಿಳಿದಿದ್ದೇವೆ. ಶಿವಮೊಗ್ಗ ಅಸಾಧಾರಣ ಸಾಮರ್ಥ್ಯ ಮತ್ತು ಖರ್ಚುಮಾಡಬಲ್ಲ ಶಕ್ತಿಯನ್ನು ಹೊಂದಿರುವ ನಗರಗಳಲ್ಲಿ ಒಂದಾಗಿದೆ. ಆದ್ದರಿಂದ ನಾವು ಈ ಮಾರುಕಟ್ಟೆಗೆ 55,000 ಚದರ ಅಡಿ ವಿಸ್ತೀರ್ಣದ ಬಹು-ಬ್ರಾಂಡ್ ಶೋ ರೂಂ ಅನ್ನು ಶಿವಮೊಗ್ಗದಲ್ಲಿ ಸ್ಥಾಪಿಸಿರುವ ಸತ್ಯಂ ಫೋರ್ ವಿಂಗ್ಸ್ ಜೊತೆ ಪಾಲುದಾರಿಕೆ ಹೊಂದಿದ್ದೇವೆ. ಶಿವಮೊಗ್ಗದಂತಹ ಸ್ಥಳಗಳು ನಮ್ಮಂತಹ ಬ್ರಾಂಡ್‌ಗಳಿಗೆ ಗುಪ್ತ ರತ್ನಗಳಾಗಿವೆ ಎಂದಿದ್ದಾರೆ.
ಹೆಚ್ಚಿನ ವಿವರಗಳಿಗಾಗಿ ಇಲ್ಲಿಗೆ ಲಾಗ್ ಇನ್ ಮಾಡಿ: www.fanzartfans.com
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post