ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ವಿನೋಬನಗರ ನೂರು ಅಡಿ ರಸ್ತೆಯ ಸವಿಬೇಕರಿ ಎದುರಿ ಜ್ಯೂವೆಲರಿಗೆ ನುಗ್ಗಿದ ಕಳ್ಳರು ಬಂದದಾರಿಗೆ ಸುಂಕವಿಲ್ಲದೆ ವಾಪಾಸಾಗಿರುವ ಘಟನೆ ನಿನ್ನೆ ರಾತ್ರಿ ನಡೆದಿದೆ.
ಮದ್ಯರಾತ್ರಿ ದತ್ತಾತ್ರೇಯ ಜ್ಯುವೆಲ್ಲರಿ ಮಗ್ಗುಲ ಟೈಲ್ಸ್ ಮಳಿಗೆಯ ಹಿಂದಿನ ಬಾಗಿಲು ಮುರಿದು ಅದರೊಳಗಿನಿಂದ ಜ್ಯೂವೆಲರಿಯ ಗೋಡೆ ಒಡೆದು ಒಳಗೆ ನುಗ್ಗಿದ್ದಾರೆ.
ಅಲ್ಲಿದ್ದ, ಲಾಕರ್ ಒಡೆಯಲು ವಿಫಲ ಯತ್ನ ಮಾಡಿದ್ದಾರೆ. ಅಲ್ಲಿನ ಶೂ ಕೇಸಲ್ಲಿದ್ದ ಬೆಳ್ಳಿಯನ್ನು ಮುಟ್ಟಿಲ್ಲ. ಬಂದ ದಾರಿಗೆ ಸುಂಕವಿಲ್ಲದೇ ಮರಳಿದ್ದಾರೆ.
ಸ್ಥಳಕ್ಕೆ ವಿನೋಬನಗರ ಪೊಲೀಸ್ ಇನ್ಸ್ ಸ್ಪೆಕ್ಟರ್ ರವಿ ಹಾಗೂ ಸಿಬ್ಬಂದಿಗಳು ಬೇಟಿ ನೀಡಿ ಪರಿಶೀಲಿಸುತ್ತಿದ್ದಾರೆ. ಜ್ಯೂವೆಲರಿ ಮಾಲಿಕ ಸತ್ಯನಾರಾಯಣ್ ಅವರು ದೂರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post