ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕರ್ನಾಟಕ ಸಂಘ ಭವನದಲ್ಲಿ ಡಿ.14ರ ಶನಿವಾರದಂದು ನಡೆದ ರಾಷ್ಟ್ರಪ್ರಶಸ್ತಿ ಪುರಸ್ಕೃತ ಡಾ. ಶಿವಮೊಗ್ಗ ಸುಬ್ಬಣ್ಣ ಹಾಗೂ ಅವರ ಸಹೋದರ ಎಸ್.ಜಿ. ಯಜ್ಞನಾರಾಯಣ ಸ್ಥಾಪಿಸಿರುವ ದಿ.ರಂಗನಾಯಕಮ್ಮ ಗಣೇಶರಾವ್ ದತ್ತಿನಿಧಿ ಕನ್ನಡ ಭಾವಗೀತೆ ಗಾಯನ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು, ವಿವರಗಳು ಇಂತಿವೆ.
ಪ್ರೌಢಶಾಲಾ ವಿಭಾಗ:
ಅಚಿಂತ ಆರ್.ಎಸ್. ಆದಿಚುಂಚನಗಿರಿ ಸಂಯುಕ್ತ ಪ್ರೌಢಶಾಲೆ (ಪ್ರಥಮ), ಸಂಹಿತ ಎಸ್. ಮೇರಿ ಇಮ್ಯಾಕುಲೇಟ್ ಬಾಲಕಿಯರ ಪ್ರೌಢಶಾಲೆ (ದ್ವಿತೀಯ), ಸುಮಿತ್ ಅರ್. ದೇಶೀಯ ವಿದ್ಯಾಶಾಲಾ ಪ್ರೌಢಶಾಲೆ, ವಿನೋಬನಗರ (ತೃತೀಯ), ಐಸಿರಿ ಕೆ. ಭಟ್, ಮೇರಿ ಇಮ್ಯಾಕುಲೇಟ್ ಬಾಲಕಿಯರ ಪ್ರೌಢಶಾಲೆ ಹಾಗೂ ಪ್ರೇರಣಾ ಜಿ. ಶೆಟ್ಟಿ, ಮಂದಾರ ಜ್ಞಾನದಾಯಿನಿ ಶಾಲೆ (ಸಮಾಧಾನಕರ ಬಹುಮಾನ).
ಪದವಿ ಪೂರ್ವ ಕಾಲೇಜು ವಿಭಾಗ:
ಚಿನ್ಮಯ್ ಕೆ., ದೇಶೀಯ ವಿದ್ಯಾಶಾಲಾ (ಸ್ವತಂತ್ರ) ಪದವಿ ಪೂರ್ವ ಕಾಲೇಜು (ಪ್ರಥಮ), ನವ್ಯ ರತ್ನ, ದೇಶೀಯ ವಿದ್ಯಾಶಾಲಾ (ಸ್ವತಂತ್ರ) ಪದವಿ ಪೂರ್ವ ಕಾಲೇಜು (ದ್ವಿತೀಯ), ಸಂಭ್ರ ಎಚ್.ಎಸ್. ದೇಶೀಯ ವಿದ್ಯಾಶಾಲಾ (ಸ್ವತಂತ್ರ) ಪದವಿ ಪೂರ್ವ ಕಾಲೇಜು (ತೃತೀಯ), ಸಮೀರ್ ಕುಲಕರ್ಣಿ, ಪೇಸ್ ಆಲ್ಟ್ರಾ ಮಾಡ್ರನ್ ಪದವಿ ಪೂರ್ವ ಕಾಲೇಜು, ಹಾಗೂ ನಂದ ಡಿ. ಗುರುಕುಲ ರೂರಲ್ ಪದವಿ ಪೂರ್ವ ಕಾಲೇಜು (ಸಮಾಧಾನಕರ ಬಹುಮಾನ).
ವಿಜೇತರಿಗೆ ಬಹುಮಾನಗಳನ್ನು ಸದ್ಯದಲ್ಲಿಯೇ ನಡೆಯಲಿರುವ ಸಮಾರಂಭದಲ್ಲಿ ವಿತರಿಸಲಾಗುವುದು ಎಂದು ಕರ್ನಾಟಕ ಸಂಘದ ಗೌರವ ಕಾರ್ಯದರ್ಶಿ ಡಾ.ಎಚ್.ಎಸ್. ನಾಗಭೂಷಣ ತಿಳಿಸಿದ್ದಾರೆ.
(ವರದಿ: ಡಾ.ಸುಧೀಂದ್ರ, ಶಿವಮೊಗ್ಗ)
Get in Touch With Us info@kalpa.news Whatsapp: 9481252093
Discussion about this post