ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ದಸರಾ ಹಬ್ಬದ ಬೋನಸ್’ಗೆ ಆಗ್ರಹಿಸಿ ಅಂಚೆ ಹಾಗೂ ಗ್ರಾಮೀಣ ಅಂಚೆ ನೌಕರರು ಇಂದು ಕೇಂದ್ರ ಸಮನ್ವಯ ಸಮಿತಿ ಆದೇಶದನ್ವಯ ಪ್ರಧಾನ ಅಂಚೆ ಕಚೇರಿ ಮುಂಭಾಗ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದರು.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ಪ್ರತಿ ವರ್ಷ ದಸರಾ ಹಬ್ಬದ ಮುಂಚಿತವಾಗಿ ಬೋನಸ್ ನೀಡುತ್ತಿದ್ದು ಈ ಭಾರಿ ನೀಡಿರುವುದಿಲ್ಲ ಎಂದು ಕೇಂದ್ರ ಸರ್ಕಾರ ಹಾಗೂ ಅಧಿಕಾರಿಗಳ ವರ್ತನೆ ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೊರೋನಾ ಮಹಾಮಾರಿ ಸಂದರ್ಭದಲ್ಲಿಯು ಸಹ ಕರ್ತವ್ಯ ನಿರ್ವಹಿಸುತ್ತಿರುವುದನ್ನು ಇಲಾಖೆ ಪ್ರಶಂಸೆಗೆ ಪಾತ್ರವಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖಂಡ ರಾಜ್ ಕುಮಾರ್, ನಾಗರಾಜ ಎಂ. ಪೂಜಾರಿ, ನಾಗಭೂಷಣ್, ಪ್ರಸನ್ನ ಕುಮಾರ್, ಜಯಲಕ್ಷ್ಮಿ, ಮೀರಾ, ಗೋವಿಂದ ರಾಜ್ ಸೇರಿದಂತೆ ಅಂಚೆ ಹಾಗೂ ಗ್ರಾಮೀಣ ಅಂಚೆ ನೌಕರರು ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post