ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸಕ್ರೆಬೈಲು: ಇಲ್ಲಿನ ಆನೆ ಬಿಡಾರದಲ್ಲಿದ್ದ 35 ವರ್ಷದ ಏಕದಂತ ಎಂಬ ಆನೆ ಇಂದು ಮೃತಪಟ್ಟಿದ್ದು, ಸಕ್ರೆಬೈಲಿನಲ್ಲಿ ಸೂತಕ ಛಾಯೆ ಆವರಿಸಿದೆ.
ಕಳೆದ 2 ವರ್ಷಗಳ ಹಿಂದೆ ಸಕಲೇಶಪುರದಲ್ಲಿ ಸೆರೆ ಹಿಡಿದಿದ್ದ ಏಕದಂತ ಎಂಬ ಆನೆಯನ್ನು ಸಕ್ರೆಬೈಲಿನ ಬಿಡಾರದಲ್ಲಿ ಇರಿಸಲಾಗಿತ್ತು. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ 35 ವರ್ಷದ ಆನೆಗೆ ಕಳೆದ ಎರಡು ದಿನಗಳಿಂದ ಆನೆಯ ಆರೋಗ್ಯದಲ್ಲಿ ಏರುಪೇರಾಗಿತ್ತು.
ಆನೆಗೆ ವೈದ್ಯಾಧಿಕಾರಿಗಳು ಚಿಕಿತ್ಸೆ ನೀಡುತ್ತಿದ್ದರು. ಆದರೆ, ಇಂದು ಶೆಟ್ಟಿಹಳ್ಳಿ ಅರಣ್ಯವ್ಯಾಪ್ತಿಯ ಕಾಡಿನಲ್ಲಿ ಸಾವನ್ನಪ್ಪಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post