ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ವಿಐಎಸ್’ಎಲ್ ಕ್ವಾಟ್ರರ್ಸ್ ಮನೆಗಳಿಗೆ ದಿನಕ್ಕೆ ಎರಡು ಬಾರಿ ಕುಡಿಯುವ ನೀಡುವ ಕುರಿತಾಗಿನ ಸಮಸ್ಯೆ ಶೀಘ್ರ ಇತ್ಯರ್ಥವಾಗುವ ಭರವಸೆಯನ್ನು ಶಾಸಕ ಬಿ.ಕೆ. ಸಂಗಮೇಶ್ವರ್ ವ್ಯಕ್ತಪಡಿಸಿದ್ದಾರೆ.
ವಿಐಎಸ್’ಎಲ್ ನಗರಾಡಳಿತ ಡಿಜಿಎಂ ವಿಶ್ವನಾಥ್ ಅವರೊಂದಿಗೆ ತಮ್ಮ ನಿವಾಸದಲ್ಲಿ ಮಾತುಕತೆ ನಡೆಸಿದ ನಂತರ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಶಾಸಕರು, ಅಧಿಕಾರಿಗಳೊಂದಿಗೆ ಈಗಾಗಲೇ ಚರ್ಚಿಸಲಾಗಿದೆ. ಇಂದು ಸಂಜೆ ಇಡಿ ಅವರೊಂದಿಗೆ ಮಾತನಾಡಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತದೆ ಎಂದರು.
ಅಧಿಕಾರಿಗಳಿಗೆ ಬುಧವಾರದವರೆಗೂ ಗಡುವ ನೀಡಲಾಗಿದ್ದು, ಅಷ್ಟರೊಳಗೆ ಸಮಸ್ಯೆ ಪರಿಹಾರವಾಗದೇ ಇದ್ದರೆ, ನಾಗರಿಕ ಕುಂದುಕೊರತೆ ಸಮಿತಿ ಹಾಗೂ ಕಾಂಗ್ರೆಸ್ ಪಕ್ಷದ ವತಿಯಿಂದ ತೀರ್ಮಾನ ಕೈಗೊಂಡು ಮುಂದಿನ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಇನ್ನು, ಕ್ವಾಟ್ರರ್ಸ್’ನ 42 ಮನೆಗಳಿಗೆ ಡಿಪಾಸಿಟ್ ಇರಿಸಲಾಗಿದ್ದ 10 ಲಕ್ಷ ರೂ.ಗಳಲ್ಲಿ ಒಂದು ಕೊಠಡಿಯ ಮನೆಗೆ 2 ಲಕ್ಷ ರೂ. ಹಾಗೂ ಎರಡು ಕೊಠಡಿಯ ಮನೆಗಳಿಗೆ 3 ಲಕ್ಷ ರೂ. ವಜಾ ಮಾಡಿಕೊಳ್ಳಲಾಗಿದೆ ಎಂದು ಲಿಖಿತ ರೂಪದಲ್ಲಿ ನೀಡಿದ್ದಾರೆ. ಈ ವಿಚಾರವನ್ನು ಲಿಖಿತ ರೂಪದಲ್ಲಿ ನೀಡಲಾಗಿದ್ದು, ಇದು 42 ಕುಟುಂಬಗಳಿಗೆ ದೊಡ್ಡ ಸಹಾಯವಾಗಿದೆ ಎಂದರು.
ಇದೇ ವೇಳೆ, ಕ್ವಾಟ್ರರ್ಸ್ ಮನೆಗಳಿಗೆ ಆರು ವರ್ಷ ಬಾಡಿಗೆ ಏರಿಕೆ ಮಾಡುವುದಿಲ್ಲ ಎಂಬ ತೀರ್ಮಾನವನ್ನು ನಾಳೆ ಲಿಖಿತ ರೂಪದಲ್ಲಿ ನೀಡುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಎಲ್ಲ ವಿಚಾರಗಳ ಕುರಿತಾಗಿ ಅಧಿಕಾರಿಗಳೊಂದಿಗೆ ತಾವು ನಿರಂತರ ಸಂಪರ್ಕದಲ್ಲಿದ್ದು, ನಿವೃತ್ತ ನೌಕರರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ನರಸಿಂಹಾಚಾರ್, ರಮಾಕಾಂತ್ ಸೇರಿದಂತೆ ನಿವೃತ್ತ ನೌಕರರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post