ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬೆಂಗಳೂರು-ಮುಂಬೈ ಕಾರಿಡಾರ್ ವ್ಯಾಪ್ತಿಗೆ ಶಿವಮೊಗ್ಗ ವಲಯವನ್ನು ಸೇರಿಸಲಾಗುವುದು ಎಂದು ಸಂಸದ ಬಿ.ವೈ. ರಾಘವೇಂದ್ರ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಉತ್ಪಾದನಾ ವಲಯ ದೇಶದ ಆರ್ಥಿಕ ಅಭಿವೃದ್ಧಿಯ ಪ್ರಮುಖ ಚಾಲನಾ ಶಕ್ತಿಯಾಗಿದ್ದು, ಕೈಗಾರಿಕೀಕರಣ ಮತ್ತು ಯೋಜಿತ ನಗರೀಕರಣ ವೃದ್ಧಿಗಾಗಿ ದೇಶಾದ್ಯಂತ ಕೈಗಾರಿಕಾ ಕಾರಿಡಾರ್‌ಗಳನ್ನು ಅಭಿವೃಧ್ಧಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ಧಿ ಕಾರ್ಯಕ್ರಮವನ್ನು ಜಾರಿಗೆ ತಂದಿದ್ದು, ಇದು ಕೇಂದ್ರದ ಮಹಾತ್ವಾಕಾಂಕ್ಷೆ ಯೋಜನೆಗಳಲ್ಲಿ ಒಂದಾಗಿದೆ ಎಂದರು.
ಭಾರತ ಸರ್ಕಾರ ಗುರುತಿಸಿ, ಅಂಗೀಕರಿಸಿದ ಐದು ಕೈಗಾರಿಕಾ ಕಾರಿಡಾರ್ ಯೋಜನೆಗಳ ಪೈಕಿ ಬೆಂಗಳೂರು-ಮುಂಬೈ ಕೈಗಾರಿಕಾ ಕಾರಿಡಾರ್ ಕೂಡ ಒಂದು. ವಿಶ್ವ ದರ್ಜೆಯ ಸಂಪರ್ಕ ಮಾರ್ಗಗಳನ್ನು ರೂಪಿಸಿ, ಯೋಜಿತ ಮತ್ತು ಸಂಪನ್ಮೂಲ ಸಹಿತ ಕೈಗಾರಿಕಾ ನೆಲೆಯ ಅಭಿವೃದ್ಧಿ ಬಿಎಂಐಸಿಯ ಉದ್ದೇಶವಾಗಿದೆ ಎಂದರು.
ಉದ್ಯೋಗ ಸೃಷ್ಠಿ ಹಾಗೂ ಉತ್ಪಾದನಾ ಸಾಮರ್ಥ್ಯ ವೃದ್ಧಿಯನ್ನು ಮಾಡುವುದು. ಉತ್ಪಾದನಾ ಮತ್ತು ಕೈಗಾರಿಕಾ ಚಟುವಟಿಕೆಯಲ್ಲಿ ಹೆಚ್ಚಿನ ಹೂಡಿಕೆ, ಸ್ಥಳೀಯ ಉತ್ಪಾದಕರ ಜಾಗತಿಕ ಸ್ಪರ್ಧಾತ್ಮಕತೆಯ ವೃದ್ಧಿ, ಪ್ರಾದೇಶಿಕ ಅಭಿವೃದ್ಧಿಯಲ್ಲಿ ವೇಗ ಹೆಚ್ಚಿಸುವುದು ಸೇರಿದಂತೆ ಹಲವಾರು ನಿರೀಕ್ಷೆಗಳಿವೆ ಎಂದರು.
ಈ ಹಿಂದಿನ ರಾಜ್ಯ ಸರ್ಕಾರವು, ಃಒಅ ಯೋಜನೆ ಜಾರಿಗೆ ಅಗತ್ಯವಿರುವ ್ಟಟಛ್ಚಿಠಿಜಿಛಿ ್ಝ್ಞ ಸಿದ್ದಪಡಿಸಿದ್ದು, ಯೋಜನೆ ರೂಪಿಸುವಾಗ ಧಾರವಾಡವನ್ನು ಮಾತ್ರ ಶಿಫಾರಸ್ಸು ಮಾಡಿರುತ್ತದೆ. ಯೋಜನೆಯಡಿ, ಬೆಂಗಳೂರು-ಮುಂಬೈ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ (ಎನ್’ಎಚ್4) ಆಸುಪಾಸಿನ ನಗರಗಳನ್ನು ಪರಿಗಣಿಸಲಾಗಿದ್ದು, ಈ ಹೆದ್ದಾರಿಯಿಂದ ಕೇವಲ 90 ಕಿಮೀ ದೂರದ ಶಿವಮೊಗ್ಗ-ಭದ್ರವತಿಯನ್ನು ಪರಿಗಣಿಸದಿರುವುದು ಕೌತುಕವಾಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ಕೈಗಾರೀಕೀಕರಣ ಸ್ವತಂತ್ರ್ಯ ಪೂರ್ವದ ಇತಿಹಾಸ ಹೊಂದಿದ್ದು, ಅಂದಿನ ಮೈಸೂರು ಸಂಸ್ಥಾನವು ಭದ್ರಾವತಿಯಲ್ಲಿ ಕಬ್ಬಿಣ ಮತ್ತು ಕಾಗದ ಕಾರ್ಖಾನೆಗಳನ್ನು ಕ್ರಮವಾಗಿ 1923 ಹಾಗೂ 1936ರಲ್ಲಿ ಪ್ರಾರಂಭಿಸಿರುತ್ತದೆ. ವಿಐಎಸ್’ಎಲ್ ಕಾರ್ಖಾನೆಯು 730ಕ್ಕೂ ಅಧಿಕ ದರ್ಜೆಯ ಉಕ್ಕಿನ ಉತ್ಪಾದನಾ ಸಾಮರ್ಥ್ಯ ಹೊಂದಿರುವ ವಿಶೇಷ ಕೇಂದ್ರವಾಗಿದೆ. ಇಂದು ಶಿವಮೊಗ್ಗದ ಮಧ್ಯಮ ಮತ್ತು ಬೃಹತ್ ಪೌಂಡ್ರಿಗಳು ವಿಶ್ವ ವಾಹನ ಉದ್ಯಮದ ಅಗತ್ಯತೆಗಳನ್ನು ಪೂರೈಸುತ್ತಿದ್ದು, ತಮ್ಮ ಉತ್ಪನ್ನಗಳನ್ನು ವಿದೇಶಗಳಿಗೆ ರಪ್ತು ಮಾಡುತ್ತಿವೆ. ಶಿವಮೊಗ್ಗ ಜಿಲ್ಲೆಯ ಶ್ರೀಗಂಧ ಮರದ ಕೆತ್ತನೆ, ತೇಗ ಮತ್ತು ಬೀಟೆ ಮರದ ಪೀಠೋಪಕರಣಗಳು ಸುಪ್ರಸಿದ್ಧಿ ಹೊಂದಿವೆ, ಆಹಾರ ಸಂಸ್ಕರಣೆ, ಮಾಹಿತಿ-ತಂತ್ರಜ್ಞಾನ ಮತ್ತು ಜವಳಿ ಉದ್ಯಮಗಳು ಜಿಲ್ಲೆಯಲ್ಲಿ ವೇಗವಾಗಿ ಬೆಳವಣಿಗೆ ಹೊಂದುತ್ತಿರುವುದನ್ನು ಕಾಣಬಹುದಾಗಿದೆ ಎಂದರು.
ಈ ಹಿಂದಿನ ಸರ್ಕಾರದ ತಪ್ಪಿನಿಂದ ಆದ ಪ್ರಮಾದವನ್ನು ಸಿರಿಪಡಿಸಲು ಹಾಗೂ ಶಿವಮೊಗ್ಗ ಜಿಲ್ಲೆಯಲ್ಲಿ ಕೈಗಾರಿಕಾ ಬೆಳವಣಿಗೆಯೊಂದಿಗೆ, ಈ ಪ್ರದೇಶ ಆರ್ಥಿಕ ಅಭಿವೃದ್ಧಿಗಾಗಿ ಈ ಕೆಳಕಂಡ ಕಾರಣಗಳನ್ನು ಮನದಟ್ಟು ಮಾಡಿ, ಬಿಎಂಸಿಐ ಯೋಜನೆಯಡಿ ಶಿವಮೊಗ್ಗವನ್ನು ಒಂದು ಆದ್ಯತಾ ನೋಡ್ ಆಗಿ ಪರಿಗಣಿಸಲು ಕೇಂದ್ರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರನ್ನು ಕೋರಲಾಗಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post