ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿಯು ಆಲ್ಕೋಳ ಕೇಂದ್ರದಿಂದ ಸರಬರಾಜಾಗುವ ಎಎಫ್-1, 2 & 3ರಲ್ಲಿ ತುರ್ತು ಕಾಮಗಾರಿ ಹಮ್ಮಿಕೊಂಡಿರುವುದರಿಂದ, ಈ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ವ್ಯಾಪ್ತಿಯ ಕೆಳಕಂಡ ಪ್ರದೇಶಗಳಲ್ಲಿ ಫೆ.13ರ ಶನಿವಾರ ಬೆಳಗ್ಗೆ 10ರಿಂದ ಸಂಜೆ 6ರವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಆಲ್ಕೋಳ, ಸಾಗರ ಮುಖ್ಯ ರಸ್ತೆ, ಅಮೃತ ಲೇಔಟ್, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ಶರಾವತಿ ದಂತ ವೈದ್ಯಕೀಯ ಕಾಲೇಜು, ಮಲ್ಲಿಗೇನಹಳ್ಳಿ, ವಾಜಪೇಯಿ ಲೇಔಟ್ ಎಬಿಸಿಡಿಇ ಬ್ಲಾಕ್, ಕಾಸ್ಮೋ ಕ್ಲಬ್, ಶ್ರೀರಾಮ್‌ಪುರ, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ತ್ಯಾವರೆಕೊಪ್ಪ, ಸಿಂಹಧಾಮ, ಗುಡ್ಡದ ಹರಕೆರೆ, ಗಾಲ್ಫ್ ಸ್ಟೇಡಿಯಂ, ಭೂಮಿಕಾ ಇಂಡಸ್ಟ್ರಿ, ಪೆಸೆಟ್ ಕಾಲೇಜ್, ಕೋಟೆ ಗಂಗೂರು, ಶಕ್ತಿಧಾಮ ಲೇಔಟ್, ಪೊಲೀಸ್ ಲೇಔಟ್, ಆಲದೇವರ ಹೊಸರೂರು, ಭೋವಿ ಕಾಲೋನಿ, ಆಶ್ರಯ ಬಡಾವಣೆ, ವೀರಗಾರನ ಬ್ಶೆರನಕೊಪ್ಪ, ವೀರನ ಬೆನವಳ್ಳಿ, ಚೆನ್ನಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ನ.ಉ.ವಿ.3ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್(ವಿದ್ಯುತ್) ತಿಳಿಸಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















