ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪ್ರತಿ ವರ್ಷದಂತೆ ಈ ವರ್ಷವೂ ಸಹ ಮಲೆನಾಡಿನ ದೇಶಭಕ್ತರ ಮನದಲ್ಲಿ ಜಾಗೃತಿ ಮೂಡಿಸಿ, ಹೃನ್ಮನ ತಣಿಸಲು ಸಂಸ್ಕಾರ ಭಾರತಿ ತಂಡ ಸಿದ್ಧವಾಗಿದೆ.
ಜ.24ರಿಂದ 26ರವರೆಗೆ ಭಾರತ್ ಮಾತಾ ಪೂಜನ್ 2020ಕ್ಕೆ ಸಜ್ಜಾಗುತ್ತಿರುವ ತಂಡ, ಈ ಹಿನ್ನೆಲೆಯಲ್ಲಿ ಹಲವು ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರಭಕ್ತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಈ ಅಂಗವಾಗಿ, ಭವ್ಯ ಭಾರತ ಮಾತೆಯ ವಿಗ್ರಹ ಪ್ರತಿಸ್ಥಾಪನೆ ಮಾಡಲಿದ್ದು, ಪ್ರಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಅವರಿಂದ ‘ರಾಷ್ಟ್ರ ಪುರುಷ ಶ್ರೀರಾಮ’ ಎಂಬ ವಿಚಾರವಾಗಿ ಭಾಷಣ ನಡೆಯಲಿದೆ.

ಭವ್ಯ ಶೋಭಾಯಾತ್ರೆಯನ್ನು ಆಯೋಜನೆ ಮಾಡಲಾಗಿದ್ದು, ಇದರಲ್ಲಿ 100 ಕ್ಕೂ ಹೆಚ್ಚು ಕಲಾವಿದರಿಂದ ಗೀತ ಗಾಯನ, ಭರತನಾಟ್ಯ, ಕಥಕ್, ಯಕ್ಷಗಾನ, ಜನಪದ ನೃತ್ಯ ಕಲಾವಿದರ ಪಾಲ್ಗೊಳ್ಳಲಿದ್ದಾರೆ.

ಇದರೊಂದಿಗೆ ಯುವ ಸಮಾವೇಶ, ಸಂವಾದ ಕಾರ್ಯಕ್ರಮ, ನವ ಚಂಡಿಕಾ ಹವನ, 100 ಕ್ಕೂ ಹೆಚ್ಚು ಮಕ್ಕಳಿಂದ ಸಂಸ್ಕಾರ ಭಾರತಿ ಧ್ಯೇಯಗೀತೆ ಮತ್ತು ವಂದೇ ಮಾತರಂ ಗೀತಗಾಯನ, ಭಾರತ ಮಾತೆಗೆ ಪುಷ್ಪ ಯಾಗ, ಬೇರೆ ಬೇರೆ ಶಾಲಾ ಕಾಲೇಜಿನ ನೂರಾರು ಮಕ್ಕಳಿಂದ 26 ರಂದು ಬೆಳಿಗ್ಗೆ ಭಾರತ ಮಾತೆಗೆ ಪುಷ್ಪಾರ್ಚನೆ ಸಹ ನಡೆಯಲಿದೆ.
Get in Touch With Us info@kalpa.news Whatsapp: 9481252093





Discussion about this post