ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಬಿಹಾರದ ಮಾಜಿ ರಾಜ್ಯಪಾಲರು, ಮಾಜಿ ರಾಜ್ಯ ಸಬಾ ಸದಸ್ಯರು ಹಾಗೂ ಶಿವಮೊಗ್ಗ ಜಿಲ್ಲೆಯ ಹೆಮ್ಮೆ ಜಸ್ಟೀಸ್ ರಾಮಾ ಜೋಯಿಸರ ನಿಧನಕ್ಕೆ ಶಾಸಕ ಆರಗ ಜ್ಞಾನೇಂದ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಈ ಜಿಲ್ಲೆಯ ಕೀರ್ತಿಯನ್ನು ದೇಶದೆತ್ತರಕ್ಕೆ ತೆಗೆದುಕೊಂಡು ಹೋದ ಕೆಲವೇ ಹಿರಿಯರಲ್ಲಿ ರಾಮಾಜೋಯಿಸರು ಒಬ್ಬರು. ಆಗುಂಬೆ ಪ್ರಾಥಮಿಕ ಶಾಲೆಯಲ್ಲಿ ಅಧ್ಯಾಪಕರಾಗಿ ವ್ರತ್ತಿ ಜೀವನ ಆರಂಭಿಸಿ, ಹೈಕೋರ್ಟ್ ನ್ಯಾಯಾಧೀಶರಾಗುವ ತನಕ, ಬಿಹಾರದ ರಾಜ್ಯಪಾಲರಾಗುವ ಹಂತಕ್ಕೆ ಬೆಳೆದಿದ್ದು ನಮ್ಮ ಜಿಲ್ಲೆಯ ಹೆಮ್ಮೆಯ ಸಂಗತಿಯಾಗಿದೆ ಎಂದಿದ್ದಾರೆ.
ರಾಷ್ಟ್ರೀಯತೆ ವಿಚಾರಧಾರೆಯನ್ನು ಮೈಗೂಡಿಸಿಕೊಂಡಿದ್ದ ಜೋಯಿಸರು ತಾವು ಏರಿದ ಎತ್ತರದ ಜಾಗದಲ್ಲೂ ತಮ್ಮ ಸಿದ್ಧಾಂತ, ತಾವು ನಂಬಿರುವ ವಿಚಾರಗಳಿಗಳಿಗೆ ಎಂದೂ ಮಹತ್ವ ಕಡಿಮೆಯಾಗದಂತೆ ನೋಡಿಕೊಂಡವರು ಎಂದು ಹೇಳಿದ್ದಾರೆ.
ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಸೆರೆವಾಸ ಅನುಭವಿಸಿದ್ದಲ್ಲದೆ, ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು ಅವರು. ಇಂದಿರಾ ಗಾಂಧಿಯವರ ಭಯದಿಂದ ವಕೀಲರನೇಕರು ನ್ಯಾಯಲಯದಲ್ಲಿ ವಾದ ಮಾಡಲು ಹಿಂಜರಿಯುತ್ತಿದ ಸಮಯದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ವಾಜಪೇಯಿ, ಆಡ್ವಾಣಿ ಸೇರಿದಂತೆ ತುರ್ತು ಪರಿಸ್ಥಿತಿ ಹೋರಾಟದಲ್ಲಿದ್ದ ಅನೇಕರ ಪರವಾಗಿ ವಾದ ಮಾಡಿದವರು ಜೋಯಿಸರು ಎಂದು ತಿಳಿಸಿದ್ದಾರೆ.
ವೈಯಕ್ತಿಕವಾಗಿ ನನ್ನ ಜೀವನದ ಮಾರ್ಗದರ್ಶಕರಲ್ಲಿ ಒಬ್ಬರಾಗಿದ್ದ ರಾಮಾ ಜೋಯಿಸರು, ಈ ಜಿಲ್ಲೆಯ ಹಲವು ವಿಚಾರಗಳಲ್ಲಿ ಮೊದಲಿಗರಾಗಿದ್ದಲ್ಲದೇ, ರಾಜ್ಯಸಭಾ ಸದಸ್ಯರಾಗಿದ್ದಾಗ ಅತಿ ಹೆಚ್ಚು ಅನುದಾನವನ್ನು ತೀರ್ಥಹಳ್ಳಿ ಕ್ಷೇತ್ರಕ್ಕೆ ನೀಡಿ ತೀರ್ಥಹಳ್ಳಿ ಬಗೆಗಿನ ತಮ್ಮ ಪ್ರೀತಿಯನ್ನು ತೋರಿಸಿದವರು.
ಸಮಾಜವಾದದ ನೆಲೆಯಾಗಿದ್ದ ತೀರ್ಥಹಳ್ಳಿ ಕ್ಷೇತ್ರದಲ್ಲಿ ರಾಷ್ಟ್ರೀಯತೆಯನ್ನು ಭಿತ್ತಿದ ಹಿರಿಯರನೇಕರ ಸಾಲಿನಲ್ಲಿ ರಾಮಾಜೋಯಿಸರ ಪಾತ್ರವು ಕೂಡ ಮಹತ್ವದ್ದು ಎಂದು ಶಾಸಕ ಆರಗ ಜ್ಞಾನೇಂದ್ರ ತಮ್ಮ ಸಂತಾಪದ ಹೇಳಿಕೆಯಲ್ಲಿ ತಿಳಿಸಿದ್ದಾರೆ,
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post