ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಸೊರಬ: ಮಹತ್ವದ ಬೆಳವಣಿಗೆಯೊಂದರಲ್ಲಿ ಖಚಿತ ಮಾಹಿತಿ ಆಧರಿಸಿ ಮಿಂಚಿನ ಕಾರ್ಯಾಚರಣೆ ನಡೆಸಿರುವ ಅರಣ್ಯ ಇಲಾಖೆ ಅಧಿಕಾರಿಗಳ ತಂಡ ಭಾರೀ ಪ್ರಮಾಣದ ಅಕ್ರಮ ದಂತವನ್ನು ವಶಕ್ಕೆ ಪಡೆದು, ಅಂತಾರಾಜ್ಯ ಕಳ್ಳಸಾಗಾಣಿಕೆದಾರರನ್ನು ಬಂಧಿಸಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.
ಎಸಿಎಫ್ ಬಾಲಚಂದ್ರ ಮತ್ತು ಡಿಆರ್‌ಎಫ್‌ಒ ರೇವಣ ಸಿದ್ದಯ್ಯ ಹಿರೇಮಠ್ ನೇತೃತ್ವದ ಅರಣ್ಯ ಜಾಗೃತ ದಳವು ಸೊರಬದಲ್ಲಿ ಮೂರು ಅಂತಾರಾಜ್ಯ ಕಳ್ಳಸಾಗಾಣಿಕೆದಾರರನ್ನು ಸೋಮವಾರ ರಾತ್ರಿ ಬಂಧಿಸಿ ಲಕ್ಷಾಂತರ ರೂ. ಮೌಲ್ಯದ ಹಿಪಪಾಟಮಸ್ ದಂತಗಳು ಮತ್ತು ದೇಹದ ಭಾಗಗಳನ್ನು ವಶಪಡಿಸಿಕೊಂಡಿದೆ ಎಂದು ಹೇಳಲಾಗಿದೆ.
ಹೊನ್ನಾವರದ ಮುಜಾಫರ್, ಕುಮಟಾ ಮೂಲದ ಮೊಹಮ್ಮದ್ ಡ್ಯಾನಿಶ್ ಮತ್ತು ಸೊರಬ ಮೂಲದ ಜಹೀರ್ ಅವರುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.
ಶಿವಮೊಗ್ಗ ಗಡಿಯಲ್ಲಿ ಸಕ್ರಿಯವಾಗಿರುವ ಒಂದೆರಡು ವಾರಗಳಿಂದ ಈ ಕಳ್ಳಸಾಗಣೆ ಗ್ಯಾಂಗ್ ಬಗ್ಗೆ ಮಾಹಿತಿ ಸಂಗ್ರಹಿಸಲಾಗಿದ್ದು, ವಿಚಾರಣೆ ನಡೆದಿದೆ ಎಂದು ಮಾಹಿತಿ ತಿಳಿದುಬಂದಿದ್ದು, ಈವರೆಗೂ ಅರಣ್ಯ ಇಲಾಖೆ ಇದನ್ನು ಅಧಿಕೃತವಾಗಿ ಮಾಹಿತಿ ಬಿಡುಗಡೆ ಮಾಡಿಲ್ಲ.
(ವರದಿ: ಮಧುರಾಮ್, ಸೊರಬ)
Get In Touch With Us info@kalpa.news Whatsapp: 9481252093
Discussion about this post