ಶಿವಮೊಗ್ಗ: ಭಜನೆಯಿಂದ ಭಗವಂತನೆಡೆಗೆ ಎಂಬ ಧ್ಯೇಯವಾಕ್ಯದೊಂದಿಗೆ ಸಾಗುತ್ತಿರುವ ಭಜನಾ ಪರಿಷತ್ ನ ಭಜನಾ ಸಮಾವೇಶ ಇಂದಿನಿಂದ ಮೂರು ದಿನಗಳ ಕಾಲ ನಡೆಯಲಿದೆ.
ರವೀಂದ್ರ ನಗರ ಪ್ರಸನ್ನ ಗಣಪತಿ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಇಂದು ಸಂಜೆ 4 ಗಂಟೆಗೆ ಪ್ರಸಿದ್ದ ಗಾಯಕ ಗರ್ತಿಕೆರೆ ರಾಘಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಶಾಸಕ ಕೆ.ಎಸ್. ಈಶ್ವರಪ್ಪ, ದೇವಾಲಯ ಅಭಿವೃದ್ಧಿ ದತ್ತಿ ಉಮಾಪತಿ, ಮತ್ತೂರು ಸೇವಾ ವಾಹಿನಿ ಟ್ರಸ್‌ಟ್ ಅಧ್ಯಕ್ಷ ಕೆ. ಸುರೇಶ್, ಭಜನಾ ಪರಿಷತ್ ಅಧ್ಯಕ್ಷ ಅ.ಪ. ರಾಮಭಟ್ಟ ಉಪಸ್ಥಿತರಿರುತ್ತಾರೆ.
ಇದೇ ವೇಳೆ ಭಜನಾ ಕ್ಷೇತ್ರದ ಹಿರಿಯ ಸಾಧಕರಿಗೆ ಸನ್ಮಾನವನ್ನೂ ಸಹ ಏರ್ಪಡಿಸಲಾಗಿದೆ.
ಇನ್ನು, ಅಕ್ಟೋಬರ್ 6ರ ನಾಳಿನ ಕಾರ್ಯಕ್ರಮವನ್ನು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವ್ಯವಸ್ಥಾಪಕ ಅಮಿಷ್ ಉದ್ಘಾಟಿಸಲಿದ್ದು, ಆನಂದಸಾಯಿ ಶಿಕ್ಷಣ ಟ್ರಸ್‌ಟ್ನ ಕಾರ್ಯದರ್ಶಿ ಕೆ. ಗೋಪಾಲ್, ವಿನೋಬ ನಗರ ಶನೈಶ್ಚರ ದೇವಾಲಯದ ಅರ್ಚಕ ವಿನಾಯಕ ಬಾಯರಿ, ಭಜನಾ ಪರಿಷತ್ ಅಧ್ಯಕ್ಷ ಅ.ಪ. ರಾಮಭಟ್ಟ ಉಪಸ್ಥಿತರಿರಲಿದ್ದು, ನಾಳೆಯೂ ಸಹ ಹಲವು ಸಾಧಕರನ್ನು ಸನ್ಮಾನಿಸಲಾಗುತ್ತದೆ.
ಅಕ್ಟೋಬರ್ 7ರ ಭಾನುವಾರ ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಶ್ರೀಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಕಾರ್ಯದರ್ಶಿ ಜಯರಾಮ್ ನೆಲ್ಲಿತ್ತಾಯ ಉದ್ಘಾಟಿಸಲಿದ್ದು, ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಎಚ್.ಬಿ. ರಮೇಶ್ ಬಾಬು, ನಾಗಸುಬ್ರಹ್ಮಣ್ಯ ದೇವಾಲಯದ ಅರ್ಚಕ ಸಂದೇಶ್ ಉಪಾಧ್ಯಾಯ, ಭಜನಾ ಪರಿಷತ್ ಅಧ್ಯಕ್ಷ ಅ.ಪ. ರಾಮಭಟ್ಟ ಉಪಸ್ಥಿತರಿರಲಿದ್ದಾರೆ.
ಮಾಹಿತಿಗಾಗಿ, ಭಜನಾ ಪರಿಷತ್ ಉಪಾಧ್ಯಕ್ಷ ಎನ್. ಶ್ರೀಧರ್(9448170417), ಕಾರ್ಯದರ್ಶಿ ಶಬರೀಶ್ ಕಣ್ಣನ್(9964072793) ಅವರನ್ನು ಸಂಪರ್ಕಿಸಬಹುದು.
Discussion about this post