ಶಿವಮೊಗ್ಗ: ಶ್ರೀಶ್ರೀಧರ ಸೇವಾ ಸಮಿತಿ ವತಿಯಿಂದ ನವೆಂಬರ್ 1ರ ನಾಳೆ ಗುರುವಾರ, ಕನ್ನಡ ರಾಜ್ಯೋತ್ಸವದ ದಿನದ ಹಿನ್ನೆಲೆಯಲ್ಲಿ ಸತ್ಕಥಾ ಶ್ರವಣ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಗುರುವಾರ ಸಂಜೆ 6 ಗಂಟೆಗೆ ರವೀಂದ್ರ ನಗರ ಗಣಪತಿ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಎಲ್ಲಾ ವರ್ಗದ ಸದ್ಭಕ್ತರೂ ಅತ್ಯಂತ ಪ್ರೀತಿಯಿಂದ ಸ್ಮರಿಸುವ ಭಗವಾನ್ ಸದ್ಗುರು ಶ್ರೀ ಶ್ರೀಧರ ಸ್ವಾಮಿಗಳ ಸಮಗ್ರ ಜೀವನ ಚರಿತ್ರೆಯನ್ನು ಪ್ರಥಮ ಬಾರಿಗೆ ಹರಿಕಥೆಯ ವಿಶೇಷ ಶೈಲಿಯಲ್ಲಿ ಅಳವಡಿಸಿ ವರದಪುರದ ವರದಯೋಗಿ ಎಂಬ ವಿಶಿಷ್ಟ ‘ಸತ್ಕಥಾ ಶ್ರವಣ ಕಾರ್ಯಕ್ರಮ’ ನಡೆಯಲಿದೆ.
ಕುಂದಾಪುರದ ಹಾಲಾಡಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಂಗ್ಲ ಉಪನ್ಯಾಸಕರಾದ ಹರಿಕಥಾ ವಿದ್ವಾನ್ ಶ್ರೀಹರಿದಾಸ ಗಣಪತಿ ಹೆಗಡೆ ಗೋಪಿ ಹಡಿನಬಾಳು ಅವರು ಈ ಸತ್ಕಥಾ ಕಾರ್ಯಕ್ರಮ ನಡೆಸಿಕೊಡಲಿದ್ದು ಇವರ ಅದ್ಭುತ ವಾಣಿಯನ್ನು ಕೇಳಲು ಇದು ಅಪೂರ್ವ ಅವಕಾಶವಾಗಿದೆ.
ಇದಕ್ಕೂ ಮುನ್ನ ಸಂಜೆ 5:30 ರಿಂದ ಶ್ರೀಧರ ಮೂಲಮಂತ್ರ ನಮಃ ಶಾಂತಾಯ …. ಸಾಮೂಹಿಕ ಜಪ ಕೂಡ ನಡೆಯಲಿದೆ.
ಗುರುಭಕ್ತರು, ಸಾರ್ವಜನಿಕರು ಎಲ್ಲರೂ ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಗುರುಕಥಾ ಶ್ರವಣ ಮಾಡಿ ಗುರುಕೃಪೆಗೆ ಪಾತ್ರರಾಗಬೇಕಾಗಿ ಸಮಿತಿ ಕೋರಿದ್ದು, ವಿವರಗಳಿಗೆ ಮೊ:9844444820 ಸಂಪರ್ಕಿಸಲು ಕೋರಿದೆ.
Discussion about this post