ಶಿವಮೊಗ್ಗ: ಶಿವಮೊಗ್ಗ ಸ್ಮಾರ್ಟ್ ಸಿಟಿ ಎಂದು ಘೋಷಣೆಯಾಗಿ ವರ್ಷಗಳೇ ಕಳೆದಿದ್ದರೂ, ನಗರದ ರಸ್ತೆಗಳು ಮಾತ್ರ ಸ್ಮಾರ್ಟ್ ಆಗದೇ ಕುಗ್ರಾಮದ ರಸ್ತೆಗಳಂತಾಗಿರುವುದಕ್ಕೆ ಜ್ವಲಂತ ನಿದರ್ಶನ ಶರಾವತಿ ನಗರದಲ್ಲಿದೆ.
ಪೊಲೀಸ್ ಚೌಕಿಯಿಂದ ಶರಾವತಿ ನಗರಕ್ಕೆ ಹಾದು ಹೋಗುವ 8 ನೆಯ ವಾರ್ಡ್’ನ 80 ಅಡಿ ’ಕಿತ್ತೂರುರಾಣಿ ಚೆನ್ನಮ್ಮ ರಸ್ತೆಯಲ್ಲಿ’ ಯುಜಿಡಿಯ ಚೇಂಬರ್ ಗುಂಡಿ ಇದ್ದು, ಇದನ್ನು ಸ್ವಚ್ಛತೆಗೊಳಿಸಲು ಗುಂಡಿಯ ಮುಚ್ಚಳವನ್ನು ತೆಗೆದು ಸರಿಯಾಗಿ ಮುಚ್ಚದೆ ಈ ಗುಂಡಿಯೂ ಈಗ ಯುಜಿಡಿ ಗುಂಡಿಯಾಗಿದೆ.
ಬೈಕ್ ಸವಾರರಿಗೆ ಹಾಗೂ ಸಾರ್ವಜನಿಕರಿಗೆ ಯಮ ಗುಂಡಿಯಾಗಿ ಪರಿಣಮಿಸಿದ್ದು, ಇದರ ಬಗ್ಗೆ ಗಮನ ಹರಿಸಬೇಕಾದ ಪಾಲಿಕೆ ಆಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಕಣ್ಮುಚ್ಚಿ ಕುಳಿತಿದೆ.
ಈ ರಸ್ತೆ ಮುಖ್ಯರಸ್ತೆ ಆಗಿರುವ ಕಾರಣ ದಿನನಿತ್ಯ ವಾಹನ ಸಂದಣಿ ಹಾಗೂ ಸಾರ್ವಜನಿಕರ ಓಡಾಟ ಅತಿ ಹೆಚ್ಚಾಗಿದೆ. ಸಾರ್ವಜನಿಕರು ಹಿಡಿ ಶಾಪ ಹಾಕುತ್ತಾ ಜೀವ ಭಯದಲ್ಲಿ ಓಡಾಡುವ ಪರಿಸ್ಥಿತಿ ಎದುರಾಗಿದೆ.
ಈ ಕೂಡಲೇ ಸಂಬಂಧಪಟ್ಟವರು ಇದರ ಬಗ್ಗೆ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದು, ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪಾಲಿಕೆ ವಿರುದ್ಧ ಸಾರ್ವಜನಿಕರು ಹಾಗೂ 8 ವಾರ್ಡ್ ನಾಗರಿಕರು ಹೋರಾಟದ ಎಚ್ಚರಿಕೆ ನೀಡಿದ್ದಾರೆ.
Discussion about this post