ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ಥಗಿತಗೊಳಿಸಲಾಗಿದ್ದ ಶಿವಮೊಗ್ಗ-ಯಶವಂತಪುರ ನಡುವಿನ ಜನಶತಾಬ್ದಿ ರೈಲು ಜೂನ್ 1ರಿಂದ ಮತ್ತೆ ಮರು ಆರಂಭಗೊಳ್ಳಲಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಅಧಿಕೃತ ಟ್ವೀಟರ್’ನಲ್ಲಿ ಮಾಹಿತಿ ಪ್ರಕಟಿಸಲಾಗಿದ್ದು, ಇದರಂತೆ 02089/90 ಸಂಖ್ಯೆಯ ಜನಶತಾಬ್ದಿ ರೈಲು ಯಶವಂತಪುರ-ಶಿವಮೊಗ್ಗ ನಡುವೆ ಪ್ರತಿದಿನ ಸಂಚರಿಸಲಿದೆ.
*Very Important Announcement*
As announced by Hon'ble MR yesterday,200 trains all over India to run from 1 st June, all bookings online only pic.twitter.com/QRU6uqR0kP— SouthWestern Railway (@SWRRLY) May 20, 2020
ಸಂಜೆ 5.30ಕ್ಕೆ ಯಶವಂತಪುರ ಬಿಡಲಿರುವ ರೈಲು ರಾತ್ರಿ 9.55ಕ್ಕೆ ಶಿವಮೊಗ್ಗ ತಲುಪಲಿದೆ. ಸಮಯದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಕೇವಲ ಆನ್’ಲೈನ್ ಬುಕ್ಕಿಂಗ್’ಗೆ ಮಾತ್ರ ಅವಕಾಶವಿದ್ದು, ಈಗಾಗಲೇ ಬುಕ್ಕಿಂಗ್ ಆರಂಭವಾಗಿದೆ.
Get in Touch With Us info@kalpa.news Whatsapp: 9481252093
Discussion about this post