ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಪ್ರತಿಷ್ಠಿತ ಜೈನ್ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿಗೆ ರಾಷ್ಟ್ರ ಮಟ್ಟದ ಜೈನ್ ಪಬ್ಲಿಕ್ ಶಾಲೆಗೆ ರಾಷ್ಟ್ರಮಟ್ಟದ ಪ್ರಥಮ ಕರಾಟೆ ಚಾಂಪಿಯನ್ ಶಿಪ್ ಮತ್ತು ಕರ್ನಾಟಕದ ಮಿನಿ ಒಲಂಪಿಕ್ ಚಾಂಪಿಯನ್ ಶಿಪ್ ಪ್ರಶಸ್ತಿ ಸಂದಿದೆ.
ಜೈನ್ ಪಬ್ಲಿಕ್ ಶಾಲೆಯು ಕಳೆದ 10 ವರ್ಷಗಳಿಂದ ಮೌಲ್ಯಾಧಾರಿತ ಶಿಕ್ಷಣ ನೀಡುವುದರ ಜೊತೆಯಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಒತ್ತು ನೀಡುತ್ತಿದೆ. ಇಂತಹ ವಿಭಿನ್ನ ಕೊಡುಗೆ ನೀಡುತ್ತಿರುವ ಶಾಲೆಯ ೮ನೆಯ ತರಗತಿ ವಿದ್ಯಾರ್ಥಿನಿ ಮದಿಹ ಇಬ್ರಾಹಿಂಗೆ ಈ ಪ್ರಶಸ್ತಿಗಳು ಒಲಿದಿದೆ.
2022-23ನೆಯ ಸಾಲಿನ ರಾಷ್ಟ್ರೀಯ ಮಟ್ಟದ ಹುಣಸೂರು ಓಪನ್ ಪ್ರಥಮ ರಾಷ್ಟ್ರಮಟ್ಟದ ಕರಾಟೆ ಚಾಂಪಿಯನ್ ಶಿಪ್’ನಲ್ಲಿ ಪ್ರಥಮ ಬಹುಮಾನವಾಗಿ ಗೋಲ್ಡ್ ಮೆಡಲ್ ಈಕೆ ಪಡೆದಿದ್ದಾರೆ. ಇದರೊಂದಿಗೆ ಕರ್ನಾಟಕ ದ್ವಿತೀಯ ಮಿನಿ ಒಲಂಪಿಕ್ ಬಾಕ್ಸಿಂಗ್ 46-49 ಕೆಜಿ ವಿಭಾಗದಲ್ಲಿ ತೃತೀಯ ಬಹುಮಾನವಾಗಿ ಕಂಚಿನ ಪದಕವನ್ನು ಪಡೆಯುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾಳೆ.
ಈ ಕುರಿತಂತೆ ಮಾತನಾಡಿದ ಪ್ರಾಂಶುಪಾಲರಾದ ಎನ್. ಪ್ರಿಯದರ್ಶಿನಿ, ಇದು ವಿದ್ಯಾರ್ಥಿಗಳಲ್ಲಿ ಸೃಜನಶೀಲ ವ್ಯಕ್ತಿತ್ವವನ್ನು ಮೈಗೂಡಿಸಿಕೊಳ್ಳಲು ಹಾಗೂ ಪ್ರಸ್ತುತ ಜಗತ್ತಿಗೆ ಅಗತ್ಯವಿರುವ ಕೌಶಲ್ಯಗಳನ್ನು ಒದಗಿಸಲು ಹಲವಾರು ವೈವಿಧ್ಯಮಯವಾದ ಶಿಕ್ಷಣ ಹಾಗೂ ಶಿಕ್ಷಣದ ಚಟುವಟಿಕೆಗಳನ್ನು ನೀಡುತ್ತಿರುವುದು ನಮ್ಮ ಸಂಸ್ಥೆಯ ವೈಶಿಷ್ಟ್ಯವಾಗಿದೆ. ಇಂತಹ ರಾಷ್ಟ್ರೀಯ ಮಟ್ಟದ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳಲು ಸಹಕರಿಸಿದ ಪೋಷಕರಿಗೆ, ವಿದ್ಯಾರ್ಥಿಗಳಿಗೆ ಶಿಕ್ಷಕ ಹಾಗೂ ಶಿಕ್ಷಕೇತರ ವೃಂದದವರಿಗೆ ಸಂಸ್ಥೆಯು ಆಭಾರಿಯಾಗಿದೆ ಎಂದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post