ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಲೋಕೋಪಯೋಗಿ ಇಲಾಖೆಯು ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ-52ರ ಬಾಳೆಬರೆ ಘಾಟ್ 40.48ರಿಂದ 41.274 ಹಾಗೂ 42.332ರಿಂದ 43.00ರ ಎರಡು ಭಾಗಗಳಲ್ಲಿ 1500ಮೀ. ಕಾಂಕ್ರೀಟ್ ಪೇವ್‌ಮೆಂಟ್ ಕಾಮಗಾರಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಸದರಿ ರಸ್ತೆಯಲ್ಲಿ ಜೂನ್ 15ರವರೆಗೆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಪರ್ಯಾಯ ಮಾರ್ಗವನ್ನು ಬಳಸಿ ಸಾರ್ವಜನಿಕರು ಪ್ರಯಾಣಿಸುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದ್ದಾರೆ.
ರಾಜ್ಯ ಹೆದ್ದಾರಿ-52ರಿಂದ ತೀರ್ಥಹಳ್ಳಿ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮದ್ಯಮ ವಾಹನಗಳು ತೀರ್ಥಹಳ್ಳಿ-ಕಾನಗೋಡು-ನಗರ-ಕೊಲ್ಲೂರು-ಕುಂದಾಪುರ ರಸ್ತೆ ಮಾರ್ಗದ ಮೂಲಕ, ತೀರ್ಥಹಳ್ಳಿ-ಯಡೂರು-ಹುಲಿಕಲ್ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮದ್ಯಮ ವಾಹನಗಳು ತೀರ್ಥಹಳ್ಳಿ-ಯಡೂರು-ಮಾಸ್ತಿಕಟ್ಟೆ-ನಗರ-ಕೊಲ್ಲೂರು-ಕುಂದಾಪುರ ರಸ್ತೆ ಮಾರ್ಗವಾಗಿ, ಶಿವಮೊಗ್ಗ-ಸಾಗರ ಕಡೆಯಿಂದ ಹೊಸನಗರದ ಮೂಲಕ ಕುಂದಾಪುರಕ್ಕೆ ಹೋಗುವ ಲಘು ಹಾಗೂ ಮದ್ಯಮ ವಾಹನಗಳು ಹೊಸನಗರ-ನಗರ-ಕೊಲ್ಲೂರು-ಕುಂದಾಪುರ ರಸ್ತೆ ಮಾರ್ಗವಾಗಿ ಹಾಘೂ ಶಿವಮೊಗ್ಗ/ಸಾಗರ ಹಾಗೂ ತೀರ್ಥಹಳ್ಳಿ ಕಡೆಯಿಂದ ಕುಂದಾಪುರಕ್ಕೆ ಹೋಗುವ ಭಾರೀ ಪ್ರಮಾಣದ ವಾಹನಗಳು ಬಟ್ಟೆಮಲ್ಲಪ್ಪ-ಸಾಗರ-ಗೇರುಸೊಪ್ಪ-ಹೊನ್ನಾವರ-ಕುಂದಾಪುರ ರಸ್ತೆ ಮೂಲಕ ಸಂಚರಿಸಬಹುದಾಗಿದೆ. ಸಾರ್ವಜನಿಕರು ಪರ್ಯಾಯ ಮಾರ್ಗದಲ್ಲಿ ಸಂಚರಿಸುವ ಮೂಲಕ ಸಹಕರಿಸುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post