ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಸಂಘ-ಸಂಸ್ಥೆಗಳು ಪ್ರಮುಖ ಪಾತ್ರವಹಿಸಿದರೆ ಸಾಕಷ್ಟು ಬದಲಾವಣೆಯನ್ನು ಸಮಾಜದಲ್ಲಿ ನಾವು ಕಾಣಬಹುದಾಗಿದೆ ಎಂದು ದೊಡ್ಡಪೇಟೆ ಪೊಲೀಸ್ ಠಾಣೆಯ ವೃತ್ತ ನೀರಿಕ್ಷಕ ವಸಂತ್ ಕುಮಾರ್ ಹೇಳಿದರು.
ನಗರದ ಖಾಸಗಿ ಬಸ್ ನಿಲ್ದಾಣದಲ್ಲಿ ಜೆಸಿಐ ಶಿವಮೊಗ್ಗ ಶರಾವತಿ ಘಟಕದಿಂದ ಜನವರಿ-2020 ರಿಂದ ಆಗಸ್ಟ್-2020 ರವರೆಗೆ ಹಮ್ಮಿಕೊಳ್ಳಲಾಗಿರುವ ಪಬ್ಲಿಕ್ ಲೀಡರ್ ಶೀರ್ಷಿಕೆಯಲ್ಲಿ ತಂಬಾಕು ಮತ್ತು ಮಾದಕ ದ್ರವ್ಯ ವ್ಯಸನ ಮುಕ್ತ ಸಮಾಜ ಎಂಬುವ ಜಾಗೃತ ಸರಣಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವೈಯಕ್ತಿಕ ಬದುಕು ಮತ್ತು ಪ್ರೊಫೆಷನಲ್ ಜವಾಬ್ದಾರಿಗಳಿಂದ ತಪ್ಪಿಸಿಕೊಳ್ಳಲು ಇಷ್ಟಪಡುವ ಇಂತಹ ವ್ಯಸನಗಳಿಂದ ಮಾರಣಾಂತಿಕ ಖಾಯಿಲೆಗಳಿಗೆ ತುತ್ತಾಗುತ್ತಾರೆ. ಡ್ರಗ್ಸ್ ಸೇವನೆ ವ್ಯಕ್ತಿಗಳ ವರ್ತನೆಯ ಮೇಲೆ ಪ್ರಭಾವ ಬೀರುವುದರಿಂದ, ಹಿಂಸೆ, ಎಚ್ಚರಿಕೆ ಇಲ್ಲದ ವಾಹನ ಚಾಲನೆ, ಅಪಘಾತ, ಅಸಭ್ಯ ಲೈಂಗಿಕ ವರ್ತನೆ ಹಾಗೂ ಕೌಟುಂಬಿಕ ಹಿಂಸೆಯ ಸಾಧ್ಯತೆಗಳು ಹೆಚ್ಚಾಗುತ್ತದೆ ಎಂದು ವಿವರಿಸಿದರು.
ಘಟಕದ ಅಧ್ಯಕ್ಷರಾದ ಜೆಸಿ ಗಾ.ರಾ. ಶ್ರೀನಿವಾಸ್ ಮಾತನಾಡಿ, ಮಾದಕ ಮನಸುಗಳಿಂದ ಸಮಾಜಕ್ಕೆ ಏನನ್ನು ಕೊಡಲಾಗದು. ಇಂತಹ ವ್ಯಸನಗಳಿಗೆ ಬೆನ್ನತ್ತಿ ಹೋಗುವ ವ್ಯಸನಿಗಳು ಜೀವ-ಜೀವನ ಕಳೆದುಕೊಳ್ಳುತ್ತಿರುವುದು ನಾವುಗಳು ನೋಡುತ್ತಿದ್ದೇವೆ. ಒಂದೆಡೆ ಆರೋಗ್ಯವು ಹಾಳಾಗುತ್ತದೆ, ಇನ್ನೊಂದೆಡೆ ಸಮಾಜದ ಸ್ವಾಸ್ಥ್ಯವು ಹದಗೆಡುತ್ತದೆ. ಹೀಗಾಗಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕಾಗಿ ನಾವೆಲ್ಲರೂ ಕೈ ಜೋಡಿಸೋಣ. ಇದು ಪ್ರತಿ ನಾಗರಿಕನ ಆದ್ಯ ಕರ್ತವ್ಯವಾಗಿದೆ. ಜೆಸಿಐ ಶಿವಮೊಗ್ಗ ಶರಾವತಿ ಘಟಕ ಪ್ರತಿ ಏರಿಯಾದಲ್ಲೂ ಈ ವ್ಯಸನ ಮುಕ್ತ ಅಭಿಯಾನವನ್ನು ಮುಂದುವರೆಸುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಸಾರ್ವಜನಿಕವಾಗಿ ಮಾತನಾಡಿದ 10 ಜನರಿಗೆ ಪಬ್ಲಿಕ್ ಲೀಡರ್-1: ಎನ್ನುವ ಸರ್ಟಿಫಿಕೇಟ್ ನೀಡಲಾಯಿತು. ವಿಶೇಷವಾಗಿ ಶಾಲಾ ಬಾಲಕ ಸಾತ್ವಿಕ್ ಸ್ಪೂರ್ತಿಗೊಂಡು ವ್ಯಸನ ಮುಕ್ತ ಸಮಾಜದ ಬಗ್ಗೆ ಮಾತಾನಾಡಿದ್ದು ಎಲ್ಲರನ್ನು ಹುರಿದುಂಬಿಸುವಂತಿತ್ತು.

ಘಟಕದ ಉಪಾಧ್ಯಕ್ಷರುಗಳಾದ ಜೆಸಿ ಶೋಭಾ ಸತೀಶ್, ಜೆಸಿ ದಿವ್ಯಾ ಪ್ರವೀಣ್, ಜೆಸಿ ಯಾಹ್ಯ ಹಾಗೂ ಘಟಕದ ಜೆಸಿ ರೈಟ್ ಅಧ್ಯಕ್ಷರಾದ ಜೆಸಿ ಸ್ವಪ್ನ ಗೌಡ ನಿರ್ದೇಶಕರಾದ, ಜೆಸಿ ಅಶ್ವಿನಿ ಆನಂದ್ ಜೆಸಿ ಸುಧಾ ಪ್ರಸನ್ನ ಉಪಸ್ಥಿತರಿದ್ದರು.
Get in Touch With Us info@kalpa.news Whatsapp: 9481252093





Discussion about this post