ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗ: ಕೊರೋನಾ ಸೋಂಕಿನಿಂದಾಗಿ ಮೂರು ದಿನಗಳ ಅಂತರದಲ್ಲಿ ತಾಯಿ-ಮಗಳು ಇಬ್ಬರೂ ಮೃತಪಟ್ಟಿರುವ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ಮಗಳು ಸುಷ್ಮಾ ಕೊರೋನಾದಿಂದ ಸಾವನ್ನಪ್ಪಿದರೆ, ನಿನ್ನೆ ಸಂಜೆ ಹೊತ್ತಿಗೆ ತಾಯಿ ರಾಜೇಶ್ವರಿ ಸಾವು ಕಂಡಿದ್ದಾರೆ. ಶಿವಮೊಗ್ಗದ ಮಲವಗೊಪ್ಪದಲ್ಲಿ ವಾಸವಿದ್ದ ತಾಯಿ ಮಗಳು. ತಾಯಿ ಮಗಳು ಇಬ್ಬರೂ ಸಹ ಒಂದೇ ಮನೆಯಲ್ಲಿ ವಾಸವಿದ್ದರು.

ಮೊದಲು ಮಗಳು ಸುಷ್ಮಾಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಆಕೆಗೆ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.ಜೊತೆಯಲ್ಲಿಯೇ ಇದ್ದಿದ್ದರಿಂದ ತಾಯಿ ರಾಜೇಶ್ವರಿಗೂ ಸಹ ಸೋಂಕು ಕಾಣಿಸಿಕೊಂಡಿತ್ತು. ಇಬ್ಬರಿಗು ಸಹ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಇದೀಗ ಇಬ್ಬರು ಸಾವನಪ್ಪಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















